ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ಘೋಷಣೆ

0
19
ಸಿದ್ದರಾಮಯ್ಯ

ಕೋಲಾರ: ಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ.ಎಚ್‌.ಮುನಿಯಪ್ಪ ಸೇರಿದಂತೆ ಬಹುತೇಕ ಎಲ್ಲರೂ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಮುಖ್ಯ. ಆಮೇಲೆ ನಾಯಕರುಗಳು. ಜನರ ಆಶೀರ್ವಾದ ಇದ್ದರೆ ನಾವು ಉಳಿಯಬಹುದು. ನಾನು ಕೆಲ‌ ದಿನಗಳ‌ ಹಿಂದೆ ಬಂದು ದೇವಸ್ಥಾನ ಮಸೀದಿ ಚರ್ಚ್‌ಗೆ ಭೇಟಿ ಮಾಡಿ ಎಲ್ಲರಿಗೂ ನಮಸ್ಕರಿಸಿದ್ದೇನೆ. ಎಲ್ಲ ಕಡೆ ನೀವು ಇಲ್ಲಿಯೇ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ ಎಂದರು.

Previous articleಕೋಲಾರದಲ್ಲಿ ಸಿದ್ದರಾಮಯ್ಯನವರಿಗೆ ಅದ್ದೂರಿ ಸ್ವಾಗತ
Next articleಸಿದ್ದರಾಮಯ್ಯ ಸರ್ಧೆಗೆ ಅಭ್ಯಂತರ ಇಲ್ಲ: ಮುನಿಯಪ್ಪ