ಕೈ ಹಿಡಿಯಲು ಸಜ್ಜಾದ ಜೆಡಿಎಸ್‌ ಹಿರಿಯ ಮುಖಂಡ

0
48
ದೇವರಾಜು

ಕೆ.ಆರ್. ಪೇಟೆ(ಮಂಡ್ಯ): ಜೆಡಿಎಸ್‌ ಹಿರಿಯ ಮುಖಂಡ ಬಿ.ಎಲ್‌. ದೇವರಾಜು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲವತ್ತು ವರ್ಷದಿಂದ ದೇವಗೌಡರ ಜತೆಗೆ ಇದ್ದೇನೆ. ಈ ಬಾರಿ ನನ್ನ ಕೊನೆಯ ಚುನಾವಣೆ ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಕೋರಿದ್ದೆ ಆದರೆ, ಈಚೆಗೆ ಪಕ್ಷಕ್ಕೆ ಬಂದಿರುವ ಎಚ್.ಟಿ.ಮಂಜು ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದಾರೆ. ಇದನ್ನು ಪುನರ್ ಪರಿಶೀಲಿಸುವಂತೆ ಕೋರಿದರೂ ಜೆಡಿಎಸ್‌ ವರಿಷ್ಠರು ಸೌಜನ್ಯಕ್ಕಾದರೂ ನನ್ನನ್ನು ಕರೆದು ಮಾತನಾಡಿಸಲಿಲ್ಲ. ನನ್ನ ಬೆಂಬಲಿಗರು, ಹಿತೈಷಿಗಳ ತೀರ್ಮಾನದಂತೆ ಮಾರ್ಚ್ 27ರಂದು ನನ್ನ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದೇನೆ ಎಂದರು.

Previous articleವಿಜಯಪುರ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದು, ಚಿನ್ನ ವಶ
Next articleಕೇಂದ್ರ ಸರ್ಕಾರದಿಂದ ಧಾರವಾಡ ಜಿಲ್ಲೆಗೆ ಮತ್ತೊಂದು ಕೊಡುಗೆ