ಕೇರಳ ಸ್ಟೋರಿ ವೀಕ್ಷಿಸಿದ ಶಾಸಕ ಡಾ. ಭರತ್ ಶೆಟ್ಟಿ

0
28

ಮಂಗಳೂರು: ಚುನಾವಣೆ ಮುಗಿದು ರಿಲ್ಯಾಕ್ಸ್ ಮೂಡಿನಲ್ಲಿದ್ದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಗುರುವಾರ ಮಂಗಳೂರಿನ ಲಾಲ್ ಬಾಗಿನಲ್ಲಿರುವ ಭಾರತ್ ಸಿನಿಮಾದಲ್ಲಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ಜಾಗೃತವಾಗಿರಲು ಕೇರಳ ಸ್ಟೋರಿ ಒಂದು ಉತ್ತಮ ಸಿನಿಮವಾಗಿದೆ.
ನಮ್ಮ ಹಿಂದೂ ಸಂಪ್ರದಾಯ ಧಾರ್ಮಿಕ ನಂಬಿಕೆಗಳ ಮೇಲೆ ಯಾವ ರೀತಿ ಮುಸ್ಲಿಂ ಭಯೋತ್ಪಾದಕರು, ಮುಸ್ಲಿಂ ಮತಿಯವಾದಿ ಸಂಘಟನೆಗಳು, ಮುಸ್ಲಿಂ ಮತಾಂದರು, ಪ್ರೀತಿ, ಪ್ರೇಮ ಹಾಗೂ ಆಮಿಷಗಳನ್ನು ಒಡ್ಡಿ ಹಿಂದೂ ಯುವತಿರನ್ನು ಮತಾಂತರಗೊಳಿಸಿ ಭಯೋತ್ಪಾದನೆಗೆ, ವೇಶ್ಯಾವಾಟಿಕೆಗೆ ದೂಡುತ್ತಿವೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರಲ್ಲದೆ, ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೂ ಇದಕ್ಕೆ ಹಿಂದೂ ಸಮಾಜ ಜಾಗೃತರಾಗುವುದು ಅಗತ್ಯ ಎಂದರು. ಇದರ ಜತೆಗೆ ಈ ಚಿತ್ರವನ್ನು ಬ್ಯಾನ್ ಮಾಡಿದ ಹಿಂದೂ ವಿರೋಧಿ ಸರಕಾರಗಳ ನಡೆಯನ್ನು ಟೀಕಿಸಿದರು.

Previous articleಜಮೀನು ವ್ಯಾಜ್ಯ: ಉರಗ ರಕ್ಷಕ ಪರಶುರಾಮ ಹತ್ಯೆ
Next articleಸುಕುಮಾರ ಶೆಟ್ಟಿ ಉಚ್ಚಾಟನೆ ಪತ್ರ ನಕಲಿ: ಕುಯಿಲಾಡಿ ಸ್ಪಷ್ಟನೆ