ಕೆಇಎ ಪರೀಕ್ಷೆ ಅಕ್ರಮ: ಅಪಾಟ್೯ಮೆಂಟ್‌ ಮಾಲೀಕ ಸೇರಿ ಇಬ್ಬರು ಬಂಧನ

0
25

ಕಲಬುರಗಿ: ಕೆಇಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ
ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಬಾಡಿಗೆ ನೀಡಿದ್ದ ಅಪಾರ್ಟ್ಮೆಂಟ್ ಮಾಲೀಕ ಮತ್ತು ಮ್ಯಾನೇಜರ್ ಅವರನ್ನು ಅಶೋಕ ನಗರ ಠಾಣೆ‌ ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ ನಗರದ ವರ್ಧಾ ಲೇಔಟ್‌ನಲ್ಲಿರೋ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಮಾಲೀಕ ಶಂಕರಗೌಡ ಪಾಟೀಲ್, ಮ್ಯಾನೇಜರ್ ದಿಲೀಪ್ ಪವಾರ್ ಅವರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ‌‌ ಒಪ್ಪಿಸಲಾಗಿದೆ. ಅಶೋಕ ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಅರುಣಕುಮಾರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಯಾಗಿದೆ.

ಆರ್‌ಡಿಪಿಯಿಂದ 10 ಸಾವಿರ ರೂ ಅಡ್ವಾನ್ಸ್ ಪಡೆದು ಬಾಡಿಗೆ ನೀಡಲಾಗಿತ್ತು. ಪೊಲೀಸರ ಆಗಮನ ಮಾಹಿತಿ ತಿಳಿದು ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಅಲ್ಲಿಂದ ಕಾಲ್ಕಿತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

Previous articleಅಪಘಾತ 6 ಜನ ಸಾವು: ಸಚಿವ ಖರ್ಗೆ ಸಂತಾಪ
Next articleಜನತೆಗೆ ಜನಪ್ರತಿನಿಧಿಗಳ ದರ್ಶನ ಭಾಗ್ಯ ಯಾವಾಗ?