ಕುಷ್ಟಗಿ: ಪಟ್ಟಣದ ಕೃಷ್ಣಗಿರಿ ಕಾಲೋನಿಯ ಒಂದನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 177 ನೇ ಮತಗಟ್ಟೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ದಂಪತಿ ಕುಟುಂಬ ಸಮೇತ ಆಗಮಿಸಿ ಮತದಾನದ ಹಕ್ಕನ್ನು ಹಾಕಿದರು.
ಬೆಳಗ್ಗೆ ಸರಿಯಾಗಿ 7.35ಕ್ಕೆ ಮತಗಟ್ಟೆಗೆ ಬಯ್ಯಾಪುರ ಪತ್ನಿ ಶಕುಂತಲಾ,ಮಗ ದೊಡ್ಡಸನಗೌಡ ಬಯ್ಯಾಪುರ,ಸೊಸೆ ಪ್ರಿಯಾಂಕ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.