ಕಾವೇರಿ ನೀರು: ಕರ್ನಾಟಕಕ್ಕೆ ಶಾಕ್

0
40

ನವದೆಹಲಿ : ಕರ್ನಾಟಕ ಸರ್ಕಾರದಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ ತಲಾ 2,600 ಕ್ಯೂಸೆಕ್‌ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ಹೊರಡಿಸಿದೆ.
ನವದೆಹಲಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ನಡೆಸಿದ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಕರ್ನಾಟಕದ ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 2,6000 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದೆ. ಈ ಮೂಲಕ ಸಂಕಷ್ಟದಲ್ಲಿದ್ದ ಕರ್ನಾಟಕ ಜನತೆಗೆ ಪುನಃ ಸಿಡಬ್ಲ್ಯೂಆರ್‌ಸಿ ಶಾಕ್‌ ನೀಡಿದೆ. ಕರ್ನಾಟಕದ ಅಧಿಕಾರಿಗಳು ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಹಾಗೂ ತಮಿಳುನಾಡು ವಾದವನ್ನು ಆಲಿಸಿ ನಂತರ ಈ ಆದೇಶ ನೀಡಿದೆ.

Previous articleಶಾಸಕನ ಮನೆಗೆ ಬೆಂಕಿ
Next article“ಸಂಯುಕ್ತ ಕರ್ನಾಟಕ’ ವರದಿಗಾರನಿಗೆ ಡಾಕ್ಟರೇಟ್‌