ಕಾರ್‌ನಲ್ಲಿದ್ದ 30 ಲಕ್ಷ ರೂ. ಜಪ್ತಿ

0
29

ಬಾಗಲಕೋಟೆ: ಐಬಿ ಹತ್ತಿರ ಫೋರ್ಡ್ ಪಿಗೋ ಕಂಪನಿಯ ಕಾರ್ (ಕೆಎ-48 ಎಂ-8821)ನಲ್ಲಿದ್ದ 30 ಲಕ್ಷ ರೂ.ಗಳ ನಗದನ್ನು ಪರಿಶೀಲನೆ ವೇಳೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದರಿ ವಾಹನವನ್ನು ಪೊಲೀಸರು ಸಂಶಯಾಸ್ಪದವೆಂದು ತಿಳಿದು ಹಿಡಿದು ಪರಿಶೀಲಿಸಿದಾಗ 30 ಲಕ್ಷ ರೂ. ನಗದು ದೊರೆತಿದೆ. ಈ ಹಣವು ಯೂನಿಯನ್ ಬ್ಯಾಂಕ್‍ನ ಇತರ ಬ್ರಾಂಚ್‍ಗಳಿಗೆ ನೀಡಲು ಸಾಗಿಸುತ್ತಿರುವುದಾಗಿ ವಾಹನ ಚಾಲಕ ತಿಳಿಸಿದ್ದು, ಚುನಾವಣಾ ಆಯೋಗದ ಕರ್ನಾಟಕ ಎಲೆಕ್ಷನ್ ಎಕ್ಸ್ಪೆಂಡಿಚರ್ ಮಾನಿಟರಿಂಗ್ ಆಪ್‍ನಲ್ಲಿ ಇದು ನಮೂದು ಆಗಿರುವುದಿಲ್ಲ. ಪ್ರಕರಣವನ್ನು ಅಧ್ಯಕ್ಷರು ಜಿಲ್ಲಾ ಹಣಕಾಸು ಮುಟ್ಟುಗೋಲು ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಇವರಿಗೆ ಪರಿಶೀಲನೆಗಾಗಿ ಸಲ್ಲಿಸಿದೆ.

Previous articleಸೈಕಲ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಆಪ್ ಅಭ್ಯರ್ಥಿ
Next articleಹೊಸ ಮೀಸಲಾತಿ: ಸರ್ಕಾರಕ್ಕೆ ಸುಪ್ರೀಂ ನೋಟಿಸ್‌