ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮದ ನಿಂದನೆ: ಎಎಸ್ಪಿಗೆ ದೂರು

0
25

ಕಾರ್ಕಳ: ರಾಜಕೀಯ ಪಕ್ಷವೊಂದರ ಕಾರ್ಯಕರ್ತರೆನ್ನಲಾದ ಕಾರ್ಕಳದ ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ಮಾಧ್ಯಮವನ್ನು ನಿಂದಿಸಿ ಹರಿಯಬಿಟ್ಟಿರುವ ಬಗ್ಗೆ ಇಂದು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಕಳದ ಪ್ರವಾಸಿ ಬಂಗಲೆಯಲ್ಲಿ ತುರ್ತು ಸಭೆ ನಡೆಸಿತು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಖ್ಯಾತ್ . ಬಿ.ಜೆ ಮತ್ತು ಹರಿಪ್ರಸಾದ್ ಶೆಟ್ಟಿ ಎಂಬಿಬ್ಬರು ತಮ್ಮ ಫೇಸ್ಬುಕ್‌‌ನಲ್ಲಿ ಮಾಧ್ಯಮವನ್ನು ನಿಂದಿಸಿ ಬರೆದಿರುವ ಬಗ್ಗೆ ಚರ್ಚಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಎಎಸ್ಪಿ ಹರ್ಷ ಪ್ರೀಯವದಂ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಯಿತು. ದೂರು ಸ್ವೀಕರಿಸಿದ ಎಎಸ್ಪಿಯವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಉಪಾಧ್ಯಕ್ಷ ಹರೀಶ್ ಸಚ್ಚರಿಪೇಟೆ, ಕಾರ್ಯದರ್ಶಿ ಹರೀಶ್ ಆಚಾರ್ಯ, ಜಿಲ್ಲಾ ಪ್ರತಿನಿಧಿ ಉದಯ್ ಮುಂಡ್ಕೂರು, ಸಂಪತ್ ನಾಯಕ್, ಸತೀಶ್ ಶೆಟ್ಟಿ, ರಾಮ್ ಅಜೆಕಾರು, ಕೃಷ್ಣ ಅಜೆಕಾರು, ಅವಿನ್ ಶೆಟ್ಟಿ, ವಾಸುದೇವ್ ಭಟ್, ನಿರಂಜನ್ ಜೈನ್ ಉಪಸ್ಥಿತರಿದ್ದರು.

Previous articleಭೀಮಾನದಿಯಲ್ಲಿ ಇಬ್ಬರು ಯುವಕರು ನೀರು ಪಾಲು: ಮುಂದುವರೆದ ಶೋಧ ಕಾರ್ಯ
Next articleಕಡಲ್ಕೊರೆತ ತಡೆಗೆ ಮುಂಜಾಗ್ರತಾ ಕ್ರಮ: ಸುರಕ್ಷಿತ ಸ್ಥಳಕ್ಕೆ ತೆರಳಲು ಸಲಹೆ