Home Advertisement
Home ಅಪರಾಧ ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ

ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ

0
109

ಚಿಕ್ಕೋಡಿ: ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಒಂದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಎರಡು ದಿನಗಳಿಂದ ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಜೈನ ಮುನಿಗಾಗಿ ಪೋಲಿಸರು ಶೋಧ ಕಾರ್ಯಚಾರಣೆ ಆರಂಭಿಸಿದ್ದರು. ತನಿಖೆ ಮಾಡಿದಾಗ ಇಬ್ಬರು ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.ಇದೀಗ ಜೈನಮುನಿ ನಾಪತ್ತೆ ಪ್ರಕರಣ ಸಂಬಂಧ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಶವ ಎಲ್ಲೆ ಇರಿಸಲಾಗಿದೆ ಎಂಬ ಮಾಹಿತಿ ಹೊರ ಬಿಟ್ಟಿಲ್ಲ. ಶವ ಕುರಿತಂತೆ ಆರೋಪಿಗಳು ಒಂದೊಂದು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಜೈನಮುನಿ ಶವಕ್ಕಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

Previous articleಕಳೆ ನಾಶಕ ಸಿಂಪಡಿಸಲು ಹೋಗಿ ಪ್ರಾಣ ಕಳೆದುಕೊಂಡ ಅರಣ್ಯಾಧಿಕಾರಿ…
Next articleಶಾಲಾ ವಾಹನ ಹರಿದು 3 ವರ್ಷದ ಮಗು ಸಾವು