Home Advertisement
Home ತಾಜಾ ಸುದ್ದಿ ಕಾಂಗ್ರೆಸ್‌ ಪರ ಸುಮಲತಾ ಬೆಂಬಲಿಗರ ಒಲವು

ಕಾಂಗ್ರೆಸ್‌ ಪರ ಸುಮಲತಾ ಬೆಂಬಲಿಗರ ಒಲವು

0
214
ಸುಮಲತಾ

ಮಂಡ್ಯ: ಸುಮಲತಾ ಬೆಂಬಲಿಗರ ಸಭೆಯಲ್ಲಿ ಬಹುತೇಕ ಕಾರ್ಯಕರ್ತರು ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.
ಮಂಡ್ಯದಲ್ಲಿ ನಡೆದ ಸುಮಲತಾ ಬೆಂಬಲಿಗರ ಸಭೆಯಲ್ಲಿ ಸುಮಲತಾ ಯಾವ ಪಕ್ಷಕ್ಕೆ ಸೇರಬೇಕೆಂಬ ಕುರಿತು ಚರ್ಚೆ ನಡೆಯಿತು. ಅಂಬರೀಷ್ 25 ವರ್ಷಗಳ ಸಕ್ರಿಯವಾಗಿ ಕಾಂಗ್ರೆಸ್‌ನಲ್ಲಿ ದುಡಿದವರು. ಸುಮಲತಾ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋದ್ರೆ ಹೆಚ್ಚು ಅನುಕೂಲ ಎಂದು ಬೆಂಬಲಿಗರ ಸಭೆಯಲ್ಲಿ ಬಹುತೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಪರ ಒಲವು ತೋರಿದರು.
ಬಿಜೆಪಿಯ ಜತೆ ಹೋದ್ರೆ ಗೆಲುವು ಕಷ್ಟ ಆಗಬಹುದು. ಜಡಿಎಸ್‌ಗೆ ಪೈಪೋಟಿ ನೀಡಬೇಕಿದ್ರೆ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.