ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರ ಕೂಪ

0
31
BASAVARAJ BOMAI

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆದರ್ಶನಗರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನನ್ನ ವಿರುದ್ಧ ಭ್ರಷ್ಟಾಚಾರದ ಅರೋಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಏನೇನಾಗಿದೆ. ಅ ಪಕ್ಷದಲ್ಲಿ ಎಷ್ಟು ಭ್ರಷ್ಟರು ಇದ್ದಾರೆ ಎಂಬುದು ನಾಡಿನ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷವೇ ದೊಡ್ಡ ಭ್ರಷ್ಟಾಚಾರದ ಕೂಪ ಎಂದು ಹರಿಹಾಯ್ದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕನಿಷ್ಠ ಸ್ಥಾನಗಳು ಲಭಿಸಲಿವೆ ಎಂದು ಸಿಎಂ ಭವಿಷ್ಯ ನುಡಿದರು.

Previous articleಧರ್ಮದ ಆಧಾರದ ಮೇಲೆ ಮೀಸಲಾತಿ ನಿಗದಿ ಅಸಾಧ್ಯ
Next article” 40% ಕಮಿಷನ್ ನಲ್ಲೇ ರಾಜ್ಯ ಸರಕಾರದ ಆಡಳಿತ”