ಕಾಂಗ್ರೆಸ್ ನಂಬಬೇಡಿ: ಮೋದಿ

0
29

ಬಳ್ಳಾರಿ: ಕಾಂಗ್ರೆಸ್ ಸರ್ಕಾರ 85% ಸರ್ಕಾರ ಆಗಿತ್ತು, ನಮ್ಮ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ರಾಜ್ಯದ ಉದ್ಧಾರಕ್ಕೆ ಶ್ರಮಿಸಿದರು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದ ಹೊರ ವಲಯದಲ್ಲಿ ಹಮ್ಮಿಕೊಂಡ ಬೃಹತ್ ಮತ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 85%ಕಮೀಶನ್ ಸರ್ಕಾರ ಆಗಿತ್ತು ಎಂಬುದನ್ನು ಸ್ವತಃ ರಾಜೀವ್ ಗಾಂಧಿ ಒಪಿದ್ದರು. ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದದ್ದು ಬರೀ ಮೂರೂವರೆ ವರ್ಷ ಇತ್ತು. ಅಷ್ಟರಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ ಎಂದರು
ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಾಲ್ಮೀಕಿ, ಬಂಜಾರ ಲಂಬಾಣಿ ಸಮಾಜ ಇದೆ. ಕಾಂಗ್ರೆಸ್ ನಿಮಗೆ ಅಭಾವ ಕೊಡುಗೆ ಬಿಟ್ಟರೆ ಏನು ಕೊಟ್ಟಿಲ್ಲ. 9 ವರ್ಷದಿಂದ ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕುಳಿತು ನಿಮ್ಮ ಅಗತ್ಯತೆ ಕುರಿತು ಯೋಚಿಸುತ್ತಿದ್ದೇನೆ. ಇದರ ಫಲವೆ ಇಂದು ನಿಮಗೆ ಮನೆ, ಶೌಚಾಲಯ ಸಿಕ್ಕಿವೆ ಎಂದು ಅವರು ತಿಳಿಸಿದರು.

Previous articleಸುಳ್ಳು ಸರ್ವೇ ಮಾಡಿಸಿ ದೇಶದ ಜನರಿಗೆ ವಂಚನೆ
Next articleನಾವೇ ಸ್ಪಷ್ಟ ಬಹುಮತ ಪಡೆಯುತ್ತೇವೆ