ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುವುದೇ ಬಿಜೆಪಿ ಕೆಲಸ

0
11
satish jarkiholi

ಬೆಳಗಾವಿ: 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ ಸಂಸ್ಥೆಗಳನ್ನು ಮಾರುವುದು ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದೇ ಒಂದು ಸಾಧನೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡು ಚುನಾವಣೆ ಕಳೆದರೂ ಮೋದಿಯವರು ಭರವಸೆ ನೀಡಿದ ಬುಲೆಟ್ ಟ್ರೇನ್ ಇನ್ನೂ ಅಹ್ಮದಾಬಾದ್ ರೈಲ್ವೆ ಸ್ಟೆಷನ್‌ನಲ್ಲಿ ನಿಂತಿದೆ. ಅದಕ್ಕೆ ಈವರೆಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಅನ್ನಿಸುತ್ತದೆ. ಮೋದಿಯವರು ಹೇಳಿದ ಇಂತಹ ಒಂದೊಂದು ಸುಳ್ಳುಗಳು ಇಂದು ಜನರ ಮುಂದೆ ಬಯಲಾಗುತ್ತಿವೆ ಎಂದರು.
ಬಿಜೆಪಿಯವರು ಕಳೆದ ಎಂಟು ವರ್ಷದಲ್ಲಿ ಯಾವುದೇ ಒಂದು ಶಿಕ್ಷಣ ಸಂಸ್ಥೆ ಕಟ್ಟಿದ ಉದಾಹರಣೆ ಕೂಡ ಇಲ್ಲ. ಚುನಾವಣೆ ಬಂದಾಗ ಜನರಿಗೆ ಪಾಕಿಸ್ತಾನ ತೋರಿಸಿ ಜನರನ್ನು ಮರಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಪಾಕಿಸ್ತಾನವನ್ನು ಹದ್ದು ಬಸ್ತಿನಲ್ಲಿ ಇಡುವುದು ಹೇಗೆ ಎಂದು ನಮ್ಮ ಹೆಮ್ಮೆಯ ಭಾರತೀಯ ಸೈನ್ಯದ 11 ಲಕ್ಷ ಸೈನಿಕರಿಗೆ ಗೊತ್ತಿದೆ. ಬಿಜೆಪಿಯವರಿಗೆ ಪಾಕಿಸ್ತಾನದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

Previous articleವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ 11.10 ಲಕ್ಷ ದಂಡ
Next articleಬ್ರಾಹ್ಮಣ ಎಂದು ಹೇಳಿಕೊಳ್ಳಲು ಬೇಸರವಿಲ್ಲ: ಹೆಬ್ಬಾರ