ಬೆಂಗಳೂರು: ನಂದಿನಿ ಕತ್ತು ಹಿಸುಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನಂದಿನಿ” ಸಂಸ್ಥೆಯನ್ನು ರಾಜಕೀಯಕ್ಕೆ ಬಳಸಿಕೊಂಡ ಕರ್ನಾಟಕ ಕಾಂಗ್ರೆಸ್ ನಂದಿನಿಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಭಾಷೆಯ ಆಧಾರದಲ್ಲಿ ನಂದಿನಿ ವಿವಾದ ಉಂಟು ಮಾಡಿದ ಕಾಂಗ್ರೆಸ್, ಕೇರಳದಲ್ಲಿ ನಂದಿನಿಯ ವ್ಯಾಪಾರಕ್ಕೆ ಕುತ್ತು ತಂದಿದೆ. ಇದೀಗ ತಿರುಪತಿ ದೇವಸ್ಥಾನದ ಪ್ರಸಾದಕ್ಕೆ ಬಳಸಲಾಗುತ್ತಿದ್ದ ನಂದಿನಿ ತುಪ್ಪಕ್ಕೂ ನಿಷೇಧ ಹೇರಲಾಗಿದೆ ಎಂದು ಹೇಳಿದ್ದಾರೆ.