ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರೂ ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚದ ಆರೋಪಗಳು ನಿಮ್ಮ ಕುಟುಂಬ, ನಿಮ್ಮ ಮಂತ್ರಿಗಳ ಮೇಲೆ, ಸರ್ಕಾರದ ಮೇಲೆ ಇದೆ. ನೀವು ಪ್ರಧಾನಿಗಳಿಗೆ ಸವಾಲು ಹಾಕುತ್ತಿರಿ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ ಅವರು, ನಿಮಗೆ ತಾಕತ್ ಇದ್ದರೇ, ನಿಮ್ಮ ಅನುಭವ, ಕಾಳಜಿಯನ್ನ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಮಾಡಿ ತೋರಿಸಿ. ಆಗ ನಿಮ್ಮ ತಾಕತ್ಗೆ ಮೆಚ್ಚುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.