ಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್‌ಗಳ ಬಿಡುಗಡೆ ಸರಣಿ

0
14
CM

ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್‌ಗಳ ಬಿಡುಗಡೆ ಸರಣಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್ ಸರಣಿ ನಡೆಸಿದರು ಅದು ಏನು ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ಸಿಗರು ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಕೊಟ್ಟ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಒಟ್ಟು ನಾಲ್ಕು ರಾಜ್ಯಗಳಲ್ಲಿ ಹೇಳಿದ್ದು ಕೊಟ್ಟಿಲ್ಲ. ಎಲ್ಲ ಬೋಗಸ್ ಆಗಿದೆ. ಕಾಂಗ್ರೆಸ್‌ನವರು ಹತಾಶರಾಗಿ, ಗೆಲ್ಲವುದಿಲ್ಲ ಎಂಬುದನ್ನು ಅರಿತು ಸುಳ್ಳು ಹೇಳಲು ತಯಾರಾಗಿದ್ದಾರೆ ಜನರು ಇದನ್ನು ನಂಬುವುದಿಲ್ಲ. ಚುನಾವಣೆಗಾಗಿ ಬೋಗಸ್ ಪಾಲಿಸಿ ಮಾಡಿಸುವುದು, ಸುಳ್ಳು ಹೇಳುವುದು ಕಾಂಗ್ರೆಸ್‌ನ ಗುಣ ಧರ್ಮವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರು ತಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ಜನರಿಗೆ ಆಶ್ವಾಸನೆ ನೀಡಿದಂತೆ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದ್ದಾರೆ ಎಂಬುದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಹತಾಶೆಯಿಂದ ಬೋಗಸ್ ಗ್ಯಾರಂಟಿ ಕಾರ್ಡ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಚುನಾವಣೆಗಾಗಿ ಮಾಡುತ್ತಿರುವ ಬೋಗಸ್ ಕಾರ್ಡ್ ಸರಣಿಯಾಗಿದೆ ಎಂದರು.

Previous articleಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ
Next articleಮಾಜಿ ಸಿಎಂಗೆ ಕ್ಷೇತ್ರ ಸಿಗದಿರುವುದು ನಾಚಿಕೆಗೇಡು