ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಎಂದು ಭಾರತ್‌ ಜೋಡೋ ಯಾತ್ರೆ

0
25
ಬಿ.ಸಿ. ನಾಗೇಶ

ಹಿರಿಯ ನಾಯಕರುಗಳೆಲ್ಲ ಕಾಂಗ್ರೆಸ್‌ ಪಕ್ಷದಲ್ಲಿ ಭವಿಷ್ಯ ಇಲ್ಲ ಎಂದು ಗೊತ್ತಾದಾಗ ಪಕ್ಷವನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಭಾರತ್ ಜೋಡೋ ಯಾತ್ರೆ ಶುರು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಲೇವಡಿ ಮಾಡಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೋಡೋ ಯಾತ್ರೆ ಮಾಡುವ ಯಾವ ಸಂದರ್ಭವೂ ದೇಶದಲ್ಲಿ ಇಲ್ಲ. ದೇಶ ಇಬ್ಭಾಗವಾಗುತ್ತಿದೆ ಎಂದಾಗ ಇಂತಹ ಯಾತ್ರೆ ಮಾಡುವುದಕ್ಕೆ ಅರ್ಥವಿದೆ. ಆದರೆ, ಇವರು ಕಾಂಗ್ರೆಸ್‌ನ ಆಂತರಿಕ ಕಲಹಗಳು ಮತ್ತು ಕಾರ್ಯಕರ್ತರ ಉತ್ಸಾಹಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದರು.

Previous articleಅರುಣ್ ಸಿಂಗ್‌ ಅವರಿಗೆ ತಾಕೀತು ಮಾಡಿ: ಸ್ವಾಮೀಜಿ
Next articleಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ: ಈಶ್ವರಪ್ಪ