ಕಳೆದ ಮೂರ್ನಾಲ್ಕು ತಿಂಗಳು ನನ್ನ ರಾಜಕೀಯ ಜೀವನದ ಕೆಟ್ಟ ದಿನಗಳು; ಶೆಟ್ಟರ ಭಾವುಕ

0
23
JAGDISH SHETTAR

ಹುಬ್ಬಳ್ಳಿ: ಯಾಕೆ ಅಂಥಾ ಗೊತ್ತಿಲ್ಲ. ಕಳೆದ ಮೂರ್ನಾಲ್ಕು ತಿಂಗಳು ನನ್ನ ರಾಜಕೀಯ ಜೀವನದಲ್ಲಿ ಕೆಟ್ಟ ದಿನಗಳು ಬಂದಿವೆ. ನನಗೆ ಭರವಸೆ ಇದೆ. ಅ ದಿನಗಳು ಅದಷ್ಟು ಬೇಗ ದೂರ ಆಗಲಿವೆ’.
ಇದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಆಡಿದ ಮಾತುಗಳು. ತಮ್ಮ ನಿವಾಸದ ಆವರಣದಲ್ಲಿ ಶನಿವಾರ ಬೆಂಬಲಿಗರು, ಅಭಿಮಾನಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಯಾಕೆ, ಏನು ಅಂಥಾ ಗೊತ್ತಿಲ್ಲ. ಆ ದಿನಗಳು ಬಂದಿವೆ. ಕೊನೆಗಾಣಲಿವೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೈಕಮಾಂಡ್ ಪ್ರತಿನಿಧಿಯಾಗಿ ಬಂದು ಮಾತನಾಡಿದ್ದಾರೆ. ಟಿಕೆಟ್ ನಿಮಗೆ ಸಿಗುತ್ತದೆ. ಹೈ ಕಮಾಂಡ್ ಎಲ್ಲವನ್ನೂ ಪರಿಶೀಲಿಸಿ ಪೂರಕ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಸಂಜೆಯವರೆಗೆ ಕಾದು ನೋಡುತ್ತೇನೆ. ನಂತರ ಮುಂದಿನ ತೀರ್ಮಾನ ಏನು ಮಾಡಬೇಕು ಎಂಬುದರ ಚಿಂತನೆ ಮಾಡುತ್ತೇನೆ ಎಂದು ಹೇಳಿದರು.

Previous articleಗುರು ನೆನೆದು ಕಣ್ಣೀರಿಟ್ಟ ಕಾರಜೋಳ..!
Next articleಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ