ಕಲ್ಲು ಕ್ವಾರಿ ನೀರಿನಲ್ಲಿ ಮುಳಗಿ ಯುವಕರ ದುರ್ಮರಣ

0
19

ಚಿಟಗುಪ್ಪ (ಬೀದರ್ ಜಿಲ್ಲೆ) : ಪಟ್ಟಣದ ವಾರ್ಡ್ ನಂಬರ್ 23 ರ ಫಾತ್ಮಪುರ ಗ್ರಾಮದ ಕೆಂಪು ಕಲ್ಲು ಕ್ವಾರಿಯ ನೀರಿನಲ್ಲಿ ಶನಿವಾರ ಯುವಕರಿಬ್ಬರು ಮುಳುಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರನ್ನು ಎಮ್. ಡಿ ಖಾಜಾ ಇಸುಬ್ (19) ಹಾಗೂ ಸೈಯದ್ ಸಮೀರ್ ಸೈಯದ್ ಹುಸೇನ್ (20) ಎಂದು ಗುರುತಿಸಲಾಗಿದೆ. ದನ ಮೇಯಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಶೀಘ್ರದಲ್ಲೇ ಕೆಎಎಸ್ ಹುದ್ದೆಗಳ ನೇಮಕಾತಿ
Next articleಲಂಚ ಸ್ವೀಕಾರ: ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ