ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ – ನಾಳೆ ಕಲಬುರ್ಗಿಗೆ ಸಿಎಂ ಬೊಮ್ಮಾಯಿ

0
34

ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನಾಳೆ ಕಲಬುರಗಿ ಪ್ರವಾಸ ಮಾಡಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಹೆಚ್ ಎ ಎಲ್ ವಿಮಾನ ನಿಲ್ದಾಣದ ಮೂಲಕ ಕಲಬುರ್ಗಿಗೆ ಪ್ರಯಾಣಿಸಲಿದ್ದಾರೆ.

ಕಲಬುರ್ಗಿಯ ಕಲ್ಯಾಣ ಕರ್ನಾಟಕದ ವಿಮೋಚನೆಯ ರೂವಾರಿಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಿದ್ದಾರೆ. 11 ಗಂಟೆಗೆ ಪೋಲಿಸ್ ಆಯುಕ್ತಾಲಯದ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. 11.30 ಕ್ಕೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. 2 ಗಂಟೆಗೆ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಎಂದು ಮರುನಾಮಕರಣ ಮಾಡಲಿದ್ದಾರೆ. ಸಂಜೆ 4.30 ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

Previous articleಈಶ್ವರಪ್ಪಗೆ ಇನ್ನೂ ಸಿಗದ ಸಚಿವ ಸ್ಥಾನ
Next articleಸೇವೆಯ ಹೆಸರಲ್ಲಿ ಮತಾಂತರ ಮಾಡಲಾಗಿತ್ತು-ಈಗ ಕಾಯ್ದೆ ಮೂಲಕ ಕಡಿವಾಣ ಹಾಕಲಾಗಿದೆ – ಆರಗ ಜ್ಞಾನೇಂದ್ರ