ಹುಬ್ಬಳ್ಳಿ: ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವದ ಅಂಗವಾಗಿ ಕರ್ಮವೀರ ಪ್ರಕಟಿಸಿರುವ “ಪೂಜ್ಯಾಯ ರಾಘವೇಂದ್ರಾಯ” ವಿಶೇಷ ಸಂಚಿಕೆಯನ್ನು ಹುಬ್ಬಳ್ಳಿ ಭವಾನಿನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶನಿವಾರ ವ್ಯಾಸರಾಜ ಮಠ(ಸೋಸಲೆ) ಉತ್ತರಾಧಿಕಾರಿ ಶ್ರೀ ೧೦೦೮ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರು ಬಿಡುಗಡೆ ಮಾಡಿದರು.
ಕರ್ಮವೀರ ಪ್ರತಿ ವರ್ಷದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಸಂಚಿಕೆಯನ್ನು ವಿಶೇಷವಾಗಿ ಪ್ರಕಟಿಸಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜ್ಯನೀಯ ಆಶೀರ್ವಚನ, ಅವರ ದೈವಿಲೀಲೆ, ಭಕ್ತರ ಮತ್ತು ಶಿಷ್ಯರ ಬಳಗದ ಮೇಲಿರುವ ಪ್ರೇಮ ಎಲ್ಲವನ್ನೂ `ಪೂಜ್ಯಾಯ ರಾಘವೇಂದ್ರಾಯ’ ವಿಶೇಷ ಸಂಚಿಕೆಯು ಒಳಗೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಲೋಕ ಶಿಕ್ಷಣ ಟ್ರಸ್ಟಿನ ಧರ್ಮದರ್ಶಿಗಳಾದ ಕೇಶವ ದೇಸಾಯಿ ಅವರು ಶ್ರೀಗಳಿಗೆ ಕರ್ಮವೀರ ಸಂಚಿಕೆಯನ್ನು ಅರ್ಪಣೆ ಮಾಡಿದರು.
ಶ್ರೀಮಠದ ವ್ಯವಸ್ಥಾಪಕ ಜೆ.ವೇಣುಗೋಪಾಲ ಆಚಾರ್ಯ, ಗೌರವ ವಿಚಾರಣಕರ್ತ ಎ.ಸಿ.ಗೋಪಾಲ, ಗುರುರಾಜಾಚಾರ್ಯ ಶ್ರೀಧರ್ ಗಡ್ಡಿ, ಅರ್ಚಕ ಗುರುರಾಜಾಚಾರ್ಯ ಸಾಮಗ, ಬಿಂದು ಮಾಧವ ಪುರೋಹಿತ್, ಸಂಯುಕ್ತ ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ್ ಹೆಗಡೆ, ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಲೆಕ್ಕಾಧಿಕಾರಿ ಅಶೋಕ ಶಾನಭಾಗ, ಜಾಹೀರಾತು ವಿಭಾಗ ವ್ಯವಸ್ಥಾಪಕ ವಿಘ್ನೇಶ್ ಭಟ್, ಸುಧೀಂದ್ರ ಹುಲಗೂರು, ಪ್ರಸಾರಂಗ ವಿಭಾಗದ ಕೆ.ಎನ್. ಶಾಂತಗಿರಿ, ಶ್ರೀಮಠದ ಪಿಆರ್‌ಓ ರಾಮಕೃಷ್ಣ, ಮನೋಹರ ಪರ್ವತಿ, ಸಂಜೀವ್ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ಈ ವೇಳೆ ಕರ್ಮವೀರ ಸಂಚಿಕೆಯನ್ನು ಅರ್ಚಕರು ರಾಘವೇಂದ್ರಸ್ವಾಮಿಗಳ ಸನ್ನಿಧಾನದಲ್ಲಿಟ್ಟು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಲೋಕ ಶಿಕ್ಷಣ ಟ್ರಸ್ಟಿನ ಧರ್ಮದರ್ಶಿಗಳಾದ ಕೇಶವ ದೇಸಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು.