ಕರ್ನಾಟಕ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ: ರಾಹುಲ್‌ ವಾಗ್ದಾಳಿ

rahul gandhi

ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಕರ್ನಾಟಕ ಸರ್ಕಾರ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹರಿಹಾಯ್ದಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ಪ್ರತಿಯೊಂದ ಕೆಲಸದಲ್ಲಿಯೂ ಶೇ. 40ರಷ್ಟು ಕಮಿಷನ್‌ ಇಲ್ಲಿ ಪಡೆಯುತ್ತಾರೆ ಎಂದು ಅವರು ಆರೋಪಿಸಿದರು. ಅಲ್ಲದೇ 2500 ಕೋಟಿ ರೂಪಾಯಿ ಹಣ ಇದ್ದರೆ ಮುಖ್ಯಮಂತ್ರಿ ಸ್ಥಾನವನ್ನು ಖರೀದಿಸಬಹುದು ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳುತ್ತಾರೆ. ಜತೆಗೆ ರಾಜ್ಯ ಸರ್ಕಾರದ ಉದ್ಯೋಗಗಳು ಮಾರಾಟ ಮಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.