ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವ ಆರಂಭವಾಗಿದ್ದು, ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮವಾಗಿವೆ. ಕರ್ಪೂರ ಹಚ್ಚಲಿರುವ ಹಿನ್ನೆಲೆ ಮಾಲೀಕರಿಗೆ ತಮ್ಮ ಬೈಕ್ಗಳನ್ನು ತೆರವುಗೊಳಿಸುವಂತೆ ಮೈಕ್ನಲ್ಲಿ ಹೇಳಿದರೂ ತೆರವು ಮಾಡಿರಲಿಲ್ಲ. ಅದಾಗ್ಯೂ, ಬೈಕ್ ನಿಲ್ಲಿಸಿದ್ದ ಸ್ಥಳ ಬಳಿ ದೊಡ್ಡ ಕರ್ಪೂರ ಹಚ್ಚಿದ ಹಿನ್ನೆಲೆ ಅದರಿಂದ ಹಾರಿದ ಬೆಂಕಿಯ ಕಿಡಿ ದ್ವಿಚಕ್ರ ವಾಹನಗಳಿಗೆ ತಗುಲಿದೆ. ಪರಿಣಾಮಾ ಪಾರ್ಕ್ ಮಾಡಿದ್ದ ಬೈಕ್ಗಳು ಹೊತ್ತಿ ಉರಿದಿದೆ.