ಕಂದಗಲ್ಲ ಹನಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟಗೆ ಅಧ್ಯಕ್ಷರಾಗಿ ಜೆ.ಟಿ.ಪಾಟೀಲ

0
53

ಬಾಗಲಕೋಟೆ ‌: ಜಿಲ್ಲೆಯ ಬೀಳಗಿ ಕಂದಗಲ್ಲ ಹನಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟಗೆ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ನೇಮಿಸಿ ಸರ್ಕಾರ ಆದೇಶಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕಂದಗಲ್ಲ ಹನಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟನ ಅಧ್ಯಕ್ಷರು ಹಾಗೂ ಸದಸ್ಯರನ್ನು ಈ ಕೆಳಗಿನಂತೆ ಆಯ್ಕೆ‌ಮಾಡಿ ಅಧಿಸೂಷನೆ ಹೊರಡಿಸಿದ್ದಾರೆ. ಟ್ರಸ್ಟನ ಅಧ್ಯಕ್ಷರಾಗಿ ಬೀಳಗಿ ಶಾಸಕ ಜೆ‌.ಟಿ.ಪಾಟೀಲ, ಸದಸ್ಯರಾಗಿ ವಿನೋದ ಅಂಬೇಕರ, ರಾಜೇಂದ್ರ‌ ದೇಶಪಾಂಡೆ, ಪಾಂಡು ಡೊಂಗ್ರೆಪ್ಪ ಮಮದಾಪೂರ, ಉಮಾರಾಣಿ ಬಾರಿಗಿಡದ, ಸುಜಾತಾ ಘಾಟೆ, ಕಿರಣ ಬಾಳಗೋಳ, ಡಿ.ಎಂ.ಸಾಹುಕಾರ ಆಯ್ಕೆಯಾಗಿದ್ದಾರೆ.

Previous articleವಿಜಯಪುರ – ಮಂಗಳೂರು ತಾತ್ಕಾಲಿಕ ರೈಲ ಇನ್ನು ಶಾಶ್ವತ ರೈಲು
Next articleಇಎಸ್‌ಐ ಆಸ್ಪತ್ರೆಗಳಲ್ಲಿ ಔಷಧ ಕೊರತೆ