ಏಷ್ಯನ್ ಗೇಮ್ಸ್: ಚಿನ್ನ, ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

0
26

ಹಾಂಗ್‌ಝೌ: ಭಾರತದ ಒಲಿಂಪಿಕ್ ವಿಜೇತ ನೀರಜ್ ಚೋಪ್ರಾ ಹಾಗೂ ಕಿಶೋರ್ ಜೇನಾ ಅವರು ಏಷ್ಯನ್ ಗೇಮ್ಸ್ ಜಾವೆಲಿಯನ್ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಚೀನಾದ ಹಾಂಗ್‌ಝೌನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಹತ್ತೊಂಬತ್ತನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನ ಜಾವೆಲಿಯನ್ ಫೈನಲ್ ಸುತ್ತಿನಲ್ಲಿ ಅತ್ಯುತ್ತಮ ಎಸೆತ‌ (88.88 ಮೀ) ಎಸೆಯುವ ಮೂಲಕ ತಮ್ಮ ಪದಕದ ಬತ್ತಳಿಕೆಗೆ ಮತ್ತೊಂದು ಚಿನ್ನದ ಪದಕ ಸೇರಿಸಿಕೊಂಡರು. ಭಾರತದವರೇ ಆದ ಕಿಶೋರ್ ಜೆನಾ ಬೆಳ್ಳಿ ಪದಕ (87.54 ಮೀಟರ್) ಗೆದ್ದು ದಾಖಲೆ ನಿರ್ಮಿಸಿದರು.

Previous articleಹೆಬ್ಬಾವಿಗೆ ಶಸ್ತ್ರಚಿಕಿತ್ಸೆ
Next articleಏಕ್ ಚತ್ ಡಾವ್: ಪಾಲಿಂಧರ್‌ನನ್ನು ಮಣಿಸಿದ ಕಿರಣ