ಎಸೆಸೆಲ್ಸಿ ಫಲಿತಾಂಶದಲ್ಲಿ ಮೂರು ಸ್ಥಾನ ಕುಸಿತ ಕಂಡ ಬಳ್ಳಾರಿ

0
40

ಬಳ್ಳಾರಿ:ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ 10ರ ಒಳಗೆ ಬರುವ ಕನಸು ಭಾಗ್ನವಾಗಿದೆ.
ಕಳೆದ ಬಾರಿಗಿಂತ ಈ ಬಾರಿ ನಮ್ಮ ಜಿಲ್ಲೆ 28ನೆಯ ಸ್ಥಾನದಲ್ಲಿತ್ತು ಈ ಬಾರಿ 31ನೆಯ ಸ್ಥಾನಕ್ಕೆ ಕುಸಿದಿದೆ.
ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡದೆ ಇರುವುದೇ ಪ್ರಮುಖ ಕಾರಣ. ಪ್ರಾಥಮಿಕ ಹಂತದಲ್ಲಿ ಒಟ್ಟು 4150ಶಿಕ್ಷಕರ ಹುದ್ದೆ ಮಂಜೂರು ಆಗಿದ್ದು ಈ ಪೈಕಿ 1700 ಹುದ್ದೆ ಖಾಲಿ ಇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಂದಾನಪ್ಪ ವಡಿಗೇರಿ ಹೇಳಿದ್ದಾರೆ.
1072 ಹುದ್ದೆ ಪೈಕಿ 462 ಹುದ್ದೆ ಖಾಲಿ ಇವೆ. 251 ಅತಿಥಿ ಶಿಕ್ಷಕರ ಸವಲತ್ತು ಒದಗಿಸಲಾಗಿತ್ತು. ಇಂಗ್ಲಿಷ್ 49, ಗಣಿತ 29, ವಿಜ್ಞಾನ ವಿಷಯದಲ್ಲಿ 44 ಹುದ್ದೆ ಖಾಲಿ ಇವೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಪೋಷಕರು ಸರಿಯಾಗಿ ಶಾಲೆಗೆ ಕಳುಹಿಸುವುದಿಲ್ಲ. ಒಂದು ದಿನ ಬಂದರೆ ಮತ್ತೊಂದು ದಿನ ಶಾಲೆಗೆ ಬರುವುದಿಲ್ಲ. ಒಂದು ವೇಳೆ ನಿರಂತರವಾಗಿ ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಿದ ಹಾಗೆ ನಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಿದರೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Previous articleಕಾಂಗ್ರೆಸ್ ನಾಯಕರು ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಉತ್ತರಿಸಲಿ
Next articleಸಿದ್ಧಗಂಗಾ ಶಾಲೆಯ ವಿದ್ಯಾರ್ಥಿನಿ ಆರ್. ಚೇತನಾ ಜಿಲ್ಲೆಗೆ ಟಾಪರ್