ಎಲ್ ಆಂಡ್ ಟಿ ನಿರ್ವಹಣೆ ಹಿಂಪಡೆಯಲು ಒತ್ತಾಯ

ಧಾರವಾಡ: ಹು-ಧಾ ಅವಳಿ ನಗರದಲ್ಲಿ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಎಲ್ ಆಂಡ್ ಟಿ ಕಂಪೆನಿಯ ನಿರ್ವಹಣಾ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ವಾಪಸ್ ಪಡೆದು ಕರ್ನಾಟಕ ಜಲಮಂಡಳಿಗೆ ನೀಡಲು ಪಕ್ಷಾತೀತವಾಗಿ ಸದಸ್ಯರು ಒತ್ತಾಯಿಸಿದರು.
ಪಾಲಿಕೆ ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ಕುರಿತು ಮಹಾಪೌರರಿಗೆ ಘೇರಾವ್ ಹಾಕಿದ ಸರ್ವ ಸದಸ್ಯರು ಕೂಡಲೇ ಎಲ್ ಆಂಡ್ ಟಿ ಕಂಪೆನಿ ಮರಳಿ ಕಳಿಸಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಸರಕಾರದ ಹಂತದಲ್ಲಿ ಯೋಜನೆ ಒಪ್ಪಿಗೆ ಆಗಿರುವುದರಿಂದ ಸರಕಾರದ ವಿರುದ್ಧ ಹೋಗಲು ಆಗಲ್ಲ. ಅದಕ್ಕಾಗಿ ಅವರಿಗೆ ದಂಡ ಹಾಕಬಹುದು. ಅವರಿಂದ ನಿರ್ವಹಣೆ ಹಿಂಪಡೆಯಲು ಆಗಲ್ಲ ಎಂದು ಸಭೆಗೆ ತಿಳಿಸಿದರು.
ಬಿಜೆಪಿ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಈ ಹಿಂದೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಇದೇ ರೀತಿ ಆದಾಗ ಸರಕಾರ ಮುತಿವರ್ಜಿ ವಹಿಸಿ ಬದಲಾಯಿಸಿತು. ಹಾಗೆ‌ ಏನಾದರೂ ದಾರಿ ಇರುತ್ತದೆ ನೋಡಿ ಎಂದು ಸಲಹೆ‌ನೀಡಿದರು.