Home Advertisement
Home ತಾಜಾ ಸುದ್ದಿ ಉತ್ತಮ ಬೆಂಗಳೂರು, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ

ಉತ್ತಮ ಬೆಂಗಳೂರು, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ

0
128
ಬಸವರಾಜ ಬೊಮ್ಮಾಯಿ

ಬೆಂಗಳೂರು: ಉತ್ತಮ ಬೆಂಗಳೂರು, ನೂತನ ಉಪನಗರ, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭವಿಷ್ಯದ ಬೆಂಗಳೂರು ನಿರ್ಮಿಸಲು ಹಾಗೂ ಹಳೆಯದನ್ನು ಸರಿಪಡಿಸಲು ಎರಡು ಯೋಜನೆಗಳು ಅಗತ್ಯವಿದೆ. ಇದಕ್ಕಾಗಿ ಅಗಾಧ ಹೂಡಿಕೆಯ ಅಗತ್ಯವಿದೆ. ತ್ಯಾಜ್ಯ ನಿರ್ವಹಣೆ, ಒಳಚರಂಡಿ, ರಾಜಕಾಲುವೆ, ರಸ್ತೆ ನಿರ್ವಹಣೆಯ ಸುಧಾರಣೆಯೂ ಆಗಬೇಕು. ಸಂಚಾರ ನಿರ್ವಹಣೆ ಸೇರಿದಂತೆ ಸಾರಿಗೆ, ಉಪನಗರ ರೈಲು, ರಸ್ತೆ, ಸಿಗ್ನಲ್ ಮುಂತಾದವನ್ನು ಇದು ಒಳಗೊಂಡಿದೆ ಎಂದರು.