Home Advertisement
Home ತಾಜಾ ಸುದ್ದಿ ಇನ್ನು “ಪ್ರಸಾದ” ತಲುಪಿಲ್ಲವಾ?

ಇನ್ನು “ಪ್ರಸಾದ” ತಲುಪಿಲ್ಲವಾ?

0
108
ಯತ್ನಾಳ

ಬೆಂಗಳೂರು: ಇನ್ನು “ಪ್ರಸಾದ” ತಲುಪಿಲ್ಲವಾ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ. ವರ್ಗಾವಣೆ ಮತ್ತು ವರ್ಗಾವಣೆ ರದ್ದು ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು ಡಿಜಿಪಿಯವರೇ ಎಷ್ಟು ಬಾರಿ ವರ್ಗಾವಣೆ ಮಾಡುತ್ತೀರಿ, ಎಷ್ಟು ಬಾರಿ ರದ್ದು ಮಾಡುತ್ತೀರಿ?

Police Establishment Boardನ ಅಧ್ಯಕ್ಷತೆ ನೀವೇ ವಹಿಸುತ್ತೀರಾ ಅಲ್ಲವೇ?

PEB ಮೀಟಿಂಗ್ ಆಗಿ, ವರ್ಗಾವಣೆ ಪಟ್ಟಿ ಬಂದಮೇಲೆ ರದ್ದು ಮಾಡುವುದು ಯಾರ ಸೂಚನೆಯ ಮೇರೆಗೆ?

KSRP ಗೆಸ್ಟ್ ಹೌಸ್ನಲ್ಲಿ PEB ಬದಲಾಗಿ ನಡೆದಿದ್ದ “PSY” ಬೋರ್ಡ್ ಸದಸ್ಯರಿಗಾಗಿಯೇ? ಹೊಸ ಸದಸ್ಯರು “ಮಾಜಿ ಶಾಸಕರು” ಪಟ್ಟು ಹಿಡಿದು ಕೆಲವು DYSP ವರ್ಗಾವಣೆ ಮಾಡಿಸಿರುವುದು ಸಿದ್ದರಾಮಯ್ಯನವರ ಆಪ್ತ ಬಳಗಕ್ಕೆ ಬೇಜಾರಿದೆ!

ತಮಗೆ ಈ ಪಟ್ಟಿ ರದ್ದು ಮಾಡಲು ಹೇಳಿದವರಿಗೆ ಇನ್ನು “ಪ್ರಸಾದ” ತಲುಪಿಲ್ಲವಾ? ಅಥವಾ KSRP ಗೆಸ್ಟ್ ಹೌಸ್ನಲ್ಲಿ ಮಾಡಿಕೊಂಡಂತಹ ಒಪ್ಪಂದಗಳಂತೆ ನಡೆದುಕೊಂಡಿಲ್ಲವಾ? ಎಂದಿದ್ದಾರೆ.