ಆಡಿಯೋ ವೈರಲ್ ಕಾಂಗ್ರೆಸ್ ಷಡ್ಯಂತ್ರ: ಆನಂದಸಿಂಗ್

0
38
ಆನಂದಸಿಂಗ್

ಕೊಪ್ಪಳ: ರಾಜ್ಯದಲ್ಲಿ ಆಡಿಯೋ, ವಿಡಿಯೋ ವೈರಲ್ ಮಾಡುವುದು ವಿರೋಧ ಪಕ್ಷದವರ ಷಡ್ಯಂತ್ರವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕನಕಗಿರಿ ಶಾಸಕ ದಡೇಸೂಗುರು ಪಿಎಸ್‌ಐ ನೇಮಕಾತಿ ಅಕ್ರಮ ಆಡಿಯೋ ವೈರಲ್ ಆಗಿದ್ದು, ಇದು ಸತ್ಯಕ್ಕೆ ದೂರವಾದ್ದು. ಅವರು ತಪ್ಪು ಮಾಡಿದ್ರೆ ಇಂದು ಇಲ್ಲಿಗೆ ಬರುತ್ತಿರಲಿಲ್ಲ. ಆದರೆ ನಾನು ಶಾಸಕರ ಮೇಲಿನ ಆರೋಪವನ್ನು ತಳ್ಳಿ ಹಾಕುವುದಿಲ್ಲ. ಸೂಕ್ತ ತನಿಖೆ ಆಗಬೇಕು. ಆಗ ಎಲ್ಲವೂ ತಿಳಿಯುತ್ತದೆ ಎಂದರು.

Previous articleಧ್ವನಿ ನನ್ನದೇ ಆದರೆ ಹಣ ಪಡೆದಿಲ್ಲ: ದಢೇಸಗೂರು
Next articleಧಾರವಾಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ಥ