ಧಾರವಾಡ: ಅತೀ ಕಡಿಮೆ ದರದಲ್ಲಿ ನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಒದಗಿಸುವ ವಿನೂತನ ಯೋಜನೆ ಜನರ ಬಳಿಗೆ ತಲುಪಿದ್ದು, ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ದೀಪಾವಳಿಯ ಉಡುಗೊರೆಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶಾದ್ಯಂತ “ಭಾರತ್ ಬ್ರಾಂಡ್” ಬೇಳೆ, ಈರುಳ್ಳಿಯಂತಹ ಪದಾರ್ಥಗಳನ್ನು ಮನೆ ಮನೆಗೆ ತಲುಪಿಸಲು, ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು ಮೂರು ಸಂಚಾರಿ ವಾಹನಗಳಲ್ಲಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಈ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ₹80 ಇದ್ದರೆ, ಭಾರತ್ ಬ್ರಾಂಡ್ ಸಂಚಾರಿ ವಾಹನದಲ್ಲಿ ₹25 ಗೆ ಸಿಗುತ್ತಿದೆ ಮತ್ತು ಕಡಲೆ ಬೇಳೆಗೆ ಮಾರುಕಟ್ಟೆ ಬೆಲೆ ₹120, ಆದರೆ ಈ ಸಂಚಾರಿ ವಾಹನದಲ್ಲಿ ₹60 ಕ್ಕೆ ಸಿಗುತ್ತಿದೆ. ಹಬ್ಬದ ಶುಭ ಸಂದರ್ಭದಲ್ಲಿ ಜನರಿಗೆ ಅತೀ ಕಡಿಮೆ ದರದಲ್ಲಿ ನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಒದಗಿಸುವ ವಿನೂತನ ಯೋಜನೆ ಜನರ ಬಳಿಗೆ ತಲುಪಿದ್ದು, ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಮತ್ತು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.