ಬಳ್ಳಾರಿ: ಬಳ್ಳಾರಿ ಅಭಿವೃದ್ದಿ ದೃಷ್ಟಿಯಿಂದ ನಾನು ಕೆ ಆರ್ ಪಿ ಪಿ ಪಕ್ಷ ಸೇರಿದ್ದೇನೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ದರೂರು ಶಂತನಗೌಡ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳು ಸುಸಜ್ಜಿತ ಆಗಿವೆ. ಮೋಕ ರಸ್ತೆಯ ವಿಶಾಲಗೊಂಡಿದೆ. 900 ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣ ಮಾಡಲು ಜಮೀನು ವಶಪಡಿಸಿಕೊಂಡು ಕಾಮಗಾರಿ ಚಾಲನೆ ನೀಡಲು ಮುಂದಾದರು ಎಂದರು.
ಲಕ್ಷ್ಮಿ ಮಿತ್ತಲ್, ಎನ್ ಎಂ ಡಿ ಸಿ ಕಂಪನಿ ಸೇರಿದಂತೆ ಹಲವು ಕಂಪನಿಗಳು ಆರಂಭ ಅಗಲಿದ್ದವು. ಬರೀ ಮೂರೂವರೆ ವರ್ಷ ಅಧಿಕಾರ ಮಾಡಿದ ಅವರು ಬಳ್ಳಾರಿ ನಗರದ ಅಭಿವೃದ್ದಿ ವಿಚಾರದಲ್ಲಿ ದೊಡ್ಡ ಕೊಡುಗೆ ಕೊಟ್ಟಿದ್ದು ಜನಾರ್ಧನ ಅವರು. ಹೀಗಾಗಿ ನಾನು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸೇರಿದ್ದೇನೆ ಎಂದು ಅವರು ತಿಳಿಸಿದರು.