ಅರ್ಜಿ ಪಡೆದು ಕೆಲಸ ಮಾಡುವವನಲ್ಲ

0
13
ಸತೀಶ ಜಾರಕಿಹೊಳಿ

ಹೊಸದುರ್ಗ: ನಾನು ಅರ್ಜಿಗಳನ್ನು ಪಡೆದುಕೊಂಡು ಕೆಲಸ ಮಾಡುವವನಲ್ಲ, ಎಲ್ಲೆಲ್ಲಿಗೆ ಏನೇನು ಕೆಲಸ ಮಾಡಬೇಕು ಎಂಬುದು ನನ್ನ ತಲೆಯೊಳಗೆ ಇರುತ್ತದೆ. ಶ್ರೀಗಳು ನೀಡಿರುವ ಮನವಿ ಪತ್ರದ ಆಶಯದಂತೆ ೫೦೦ ಎಕರೆ ಜಮೀನು ಮಂಜೂರಾತಿ, ಮಧುರೆಯಿಂದ ಶ್ರೀಮಠಕ್ಕೆ ನೇರ ಬೈಪಾಸ್ ರಸ್ತೆ ಮತ್ತಿತರೆ ಅಭಿವೃದ್ಧಿ ವಿಚಾರವಾಗಿ ನೀಡಿರುವ ಅನುದಾನಗಳ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆಶ್ವಾಸನೆ ನೀಡಿದರು.
ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಸನ್ಮಾನ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಮಠದ ಹಿಡಿತದಲ್ಲಿರುವ ೫೦೦ ಎಕರೆ ಜಮೀನು ಲೀಜ್ ಮುಗಿದಿದ್ದು, ಇದನ್ನ ಫಾಲೋ ಮಾಡ್ತೀನಿ. ಶ್ರೀಗಳು ಮನವಿ ನೀಡಿರುವಂತೆ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಮಠಕ್ಕೆ ನೀಡಿದ್ದ ೫೦೦ ಎಕರೆ ಜಮೀನು ಈಗಲೂ ಸಹಾ ಶ್ರೀಮಠದ ಹಿಡಿತದಲ್ಲಿದೆ. ಆದರೆ ದಾಖಲೆ ಯಲ್ಲಿ ಇಲ್ಲ, ಈ ಜಮೀನು ಅಂದಿನಿಂದ ಇಲ್ಲಿಯವರೆಗೂ ಸಹ ಲೀಜ್ ನಲ್ಲಿದೆ. ಆದರೆ ಈ ಲೀಜ್ ಅವಧಿ ಮುಗಿದಿದೆ. ಇದೇ ಜಮೀನಿನ ಬಗ್ಗೆ ಶ್ರೀಗಳ ಆಶಯದಂತೆ ಮುಖ್ಯ ಮಂತ್ರಿಯವರೊಂದಿಗೆ ಮತ್ತು ಸಚಿವ ಸಂಪುಟದೊಂದಿಗೆ ಚರ್ಚಿಸಿ ಶ್ರೀಮಠದ ಟ್ರಸ್ಟ್ ಹೆಸರಿಗೆ ಮಾಡಿಕೊಡುವ ಭರವಸೆ ನೀಡಿದರು. ಪುರುಷೋತ್ತಮಾನಂದ ಪುರಿ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Previous articleಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪುರಸ್ಕಾರ ಶೀಘ್ರ
Next articleದೇವದುರ್ಗ ಜೈಲಿನಿಂದ ಕೊಲೆ ಆರೋಪಿ ಪರಾರಿ