ಅಮೋಘ್ ಲೀಲಾ ದಾಸ್‌ಗೆ ಇಸ್ಕಾನ್‌ನಿಂದ 1 ತಿಂಗಳ ನಿಷೇಧ

0
16

ನವದೆಹಲಿ: ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ ಅವರಿಗೆ ಇಸ್ಕಾನ್‌ 1 ತಿಂಗಳ ನಿಷೇಧವನ್ನು ಹೇರಿದೆ. ಇತ್ತೀಚಿಗೆ ನೀಡಿದ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ಮೀನು ತಿಂದರೆ ಅದಕ್ಕೆ ನೋವಾಗುವುದಿಲ್ಲವಾ? ಮೀನನ್ನು ತಿನ್ನು ಎಂದು ಹೇಳುವ ಹೃದಯದಲ್ಲಿ ಕರುಣೆ ಇರಲು ಸಾಧ್ಯವೆ? ತುಳಸಿಗಿಂತ ಬದನೆಕಾಯಿ ಹಸಿವನ್ನು ನೀಗಿಸುತ್ತದೆ ನಿಜ, ಹಾಗೆಂದು ತುಳಸಿಗಿಂತ ಬದನೆಕಾಯಿ ಶ್ರೇಷ್ಠ ಎಂದು ಹೇಳಬಹುದೆ? ಹಾಗೆಯೇ ಭಗವದ್ಗೀತೆಯನ್ನು ಅಧ್ಯಯನ ಮಾಡುವುದಕ್ಕಿಂತ ಫುಟ್​ಬಾಲ್​ ಆಡುವುದೇ ಶ್ರೇಷ್ಠ ಎಂದು ಹೇಳಬಹುದೆ? ಖಂಡಿತ ಇಲ್ಲ. ಸ್ವಾಮಿ ವಿವೇಕಾನಂದರ ಬಗ್ಗೆ ನಾನು ಅಪಾರ ಗೌರವವನ್ನು ಹೊಂದಿದ್ದೇನೆ ನಿಜ, ಅವರೇನಾದರೂ ನನ್ನೆದುರು ಇದ್ದಿದ್ದರೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳಿದ್ದನ್ನೆಲ್ಲವನ್ನೂ ಕುರುಡನಂತೆ ನಂಬಲಾರೆ, ಒಪ್ಪಲಾರೆ’ ಎಂದು ಅಮೋಘ ಲೀಲಾ ದಾಸರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನೆಟ್ಟಿಗರಿಂದ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇಸ್ಕಾನ್‌ ಅಮೋಘ ಲೀಲಾ ದಾಸ್ ಅವರ ಪ್ರವಚನಗಳಿಗೆ 1 ತಿಂಗಳ ಮಟ್ಟಿಗೆ ನಿಷೇಧ ಹೇರಿದೆ. ಅಷ್ಟೇ ಅಲ್ಲದೇ ಈ ಹೇಳಿಗೆ ವಿಷಾದ ವ್ಯಕ್ತಪಡಿಸಿದೆ.

Previous articleತಪ್ಪಿದ ವಿಮಾನ ದುರಂತ: ತುರ್ತು ಭೂ ಸ್ಪರ್ಶ
Next articleನೂರಕ್ಕೆ ನೂರು ನಾನೇ ವಿಪಕ್ಷ ನಾಯಕ