ಧಾರವಾಡ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರ್ಯಾಲಿ ನಡೆಸಿದರು.
ಅಪಾರ ಜನಸ್ತೋಮದ ಮಧ್ಯೆ ನಡೆದ ರ್ಯಾಲಿಯಲ್ಲಿ ಪುಷ್ಪದ ಸುರಿಮಳೆ ಮಾಡುವ ಮೂಲಕ ಜನರು ಬೊಮ್ಮಾಯಿ ಅವರನ್ನು ಸ್ವಾಗತಿಸಿದರು. ನಂತರ ಗುಲಾಬಿ ಹೂವಿನಲ್ಲಿ ಸಿದ್ದಪಡಿಸಲಾಗಿದ್ದ ಬೃಹತ್ ಮಾಲೆಯನ್ನು ಹಾಕಲಾಯಿತು.