ಕುಷ್ಟಗಿ: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ದಿನದ 24 ತಾಸುಗಳ ಕಾಲ ಕೆಲಸ ಮಾಡುವ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರನ್ನು ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ನಿವಾಸದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು,ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮಿಸಬೇಕು ಅಂದಾಗ ಮಾತ್ರ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
90 ದಿನಗಳಲ್ಲಿ ಚುನಾವಣೆ: ಇನ್ನೇನು 2023ರ ವಿಧಾನಸಭೆ ಚುನಾವಣೆ ಮೇ ಮೊದಲ ವಾರದಲ್ಲಿ ಮತದಾನ ಜರುಗಲಿದ್ದು, ಪಕ್ಷದ ಕಾರ್ಯಕರ್ತರು ಹಗಲಿರುಳು ಎನ್ನದೆ ಕೆಲಸ ಮಾಡುವುದರ ಮೂಲಕ ಇನ್ನೂ ಮೂರು ತಿಂಗಳ ಕಾಲ ಅವಕಾಶವಿದ್ದು ಇಂದಿನಿಂದಲೇ ಚುನಾವಣೆಯ ತಂತ್ರ ಪ್ರತಿ ತಂತ್ರದ ಮೂಲಕ ಮತ್ತೊಮ್ಮೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾವು ನೀವು ಎಲ್ಲರೂ ಸೇರಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
೯೦ ದಿನಗಳಲ್ಲಿ ಚುನಾವಣೆ ನಡೆಯುವ ಸಂಭವವಿದೆ: ವಿಧಾನಸಭಾ ಚುನಾವಣೆ ಮೇ ಮೊದಲ ವಾರದಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಸಂಭವವಿದ್ದು ಈಗಾಗಲೇ ಪಕ್ಷ ಸಂಘಟನೆಗೆ ಕೆಲಸ ಪ್ರಾರಂಭ ಮಾಡಬೇಕು. ಇನ್ನು ಎರಡು ಮೂರು ತಿಂಗಳ ಕಾಲ ಸಮಯವಿದ್ದು ಈ ಸಮಯವನ್ನು ಹಾಳು ಮಾಡಿಕೊಳ್ಳದೆ ಪ್ರತಿಯೊಂದು ನಿಮಿಷವು ಸಹ ಅತ್ಯಗತ್ಯವಾಗಿದ್ದು,ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸಲು ಕಾರ್ಯಕರ್ತರ ಪಡೆ ಸನ್ನದ್ಧರಾಗಿ ಕೆಲಸ ಮಾಡಬೇಕು.
ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರನ್ನು ಸೋಲಿಸುವುದರ ಮೂಲಕ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರವರನ್ನು ೧೮೦೩೧ ಮತಗಳ ಅಂತರ ಅಂತರದಿಂದ ಗೆಲುವು ಸಾಧಿಸುವಂತೆ ಆಶೀರ್ವಾದ ಮಾಡಿದ್ದೀರಿ ಅದೇ ರೀತಿಯಾಗಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಯ್ಯಾಪುರ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲೆ ಇದೆ ಎಂದರು.
ಅಭಿವೃದ್ಧಿಯ ಮೂಲ ಮಂತ್ರ:ಶಾಸಕ ಬಯ್ಯಾಪೂರ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅವರ ನಾಡಿ ಮಿಡಿತ ಏನಾದರೂ ಇದ್ದರೆ ಅದು ಕ್ಷೇತ್ರದ ಜನತೆ ಮತ್ತು ಅಭಿವೃದ್ಧಿಗೋಸ್ಕರ ಸದಾ ಚಿಂತನೆ ಮಾಡುತ್ತಾರೆ. ಶಾಸಕ ಭಯಪೂರವನ್ನು ಮತ್ತೊಮ್ಮೆ ಕ್ಷೇತ್ರದಲ್ಲಿ ಗೆಲ್ಲಿಸುವುದರ ಮೂಲಕ ಇತಿಹಾಸವನ್ನು ಮರು ಸೃಷ್ಟಿಸಬೇಕು ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಿಗಿ, ಚಂದಪ್ಪ ತಳವಾರ್,ಮಾಲತಿ ನಾಯಕ,ಲಾಡ್ಲೇ ಮಷಾಕ ದೋಟಿಹಾಳ ಯಲಬುರ್ಗಿ,ಪುರಸಭೆ ಸದಸ್ಯರಾದ ಮೈನುದ್ದೀನ ಮಲ್ಲಾ, ರಾಮಣ್ಣ ಬಜಂತ್ರಿ, ಮಹಿಬೂಬ, ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಕಡೂರು,ರಾಘವೇಂದ್ರ ಭಜಂತ್ರಿ ಮಂಜುನಾಥ್ ಕಟ್ಟಿಮನಿ,ಶಿವಕುಮಾರ ಕಟ್ಟಿಮನಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.