ಬೆಂಗಳೂರ: ವಾರ್ಷಿಕವಾಗಿ 5 GWh ಸಾಮರ್ಥ್ಯದೊಂದಿಗೆ, 2.5 MW ವಿದ್ಯುತ್ ಪರಿವರ್ತನಾ ವ್ಯವಸ್ಥೆಯೊಂದಿಗೆ, ಯುಟಿಲಿಟಿ-ಸ್ಕೇಲ್ 5 MWh DC ಬ್ಲಾಕ್ ವಿದ್ಯುತ್ ಉತ್ಪಾದಿಸಲಿರುವ Lineage Power Pvt Ltdನ ಅತ್ಯಾಧುನಿಕ BESS ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿ ಮಾತನಾಡಿ ನವೀಕರಿಸಬಹುದಾದ ವಿದ್ಯುತ್ ಶಕ್ತಿಯು ನಮ್ಮ ಗ್ರಿಡ್‌ಗೆ ಹೆಚ್ಚು ಹರಿಯುವ, ವಿದ್ಯುತ್ ಸಂಗ್ರಹಣೆ ಅತ್ಯಗತ್ಯವಿದ್ದು, ಈ ಯೋಜನೆ 2030 ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ನಮ್ಮ ಗುರಿಯನ್ನು ತಲುಪಲು ಮಹತ್ವದ ಹೆಜ್ಜೆಯಿಡಲು ಸಹಕಾರಿಯಾಗಿದೆ. ಈ ವೇಳೆ ಕರ್ನಾಟಕದ ಇಂಧನ ಖಾತೆಯ ಸಚಿವ ಕೆ. ಜೆ. ಜಾರ್ಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.