ಅತ್ತಿಬೆಲೆ ದುರಂತ: ಗೋದಾಮ ಮಾಲೀಕನ ಮೇಲೆ ಕ್ರಮ

0
15

ಮೈಸೂರು : ಅತ್ತಿಬೆಲೆಯಲ್ಲಿ ನಡೆದಿರುವ ಅಗ್ನಿ ದುರಂತದಲ್ಲಿ ಗೋದಾಮಿನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದುರಂತದಲ್ಲಿ 14 ಜನ ಮೃತಪಟಿದ್ದು, ಪಟಾಕಿ ಗೋದಾಮಿನಲ್ಲಿ ಮುನ್ನೆಚ್ಚರಿಕಾ ಹಾಗೂ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಕೇಂದ್ರ ಬರ ಅಧ್ಯಯನ ತಂಡ ಕಾಟಾಚಾರಕ್ಕೆ ಅಧ್ಯಯನ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿರುವ ಬಗ್ಗೆ ಮಾತನಾಡಿ ವಸ್ತುಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡಲು ತಂಡಕ್ಕೆ ತಿಳಿಸಲಾಗಿದೆ ಎಂದರು.

Previous articleಪಟಾಕಿ ದುರಂತ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ
Next articleಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ