ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

0
19

ಮೂಡುಬಿದಿರೆ: ರಿಡ್ಜ್ಸ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ಮತ್ತು ಮೂಡುಬಿದಿರೆ ಪೊಲೀಸರು ಇಂದು ಮುಂಜಾನೆ ರಕ್ಷಿಸಿದ್ದಾರೆ.
ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿ ಜಂಟಿ ಕಾರ್ಯಚರಣೆ ನಡೆಸಿ ಕೆಲ್ಲಪುತ್ತಿಗೆ ಬಳಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದು ಜಿ.ಕೆ.ಗಾರ್ಡನ್ ಬಳಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಾರಿನಲ್ಲಿದ್ದ ಇಬ್ಬರು ಗೋಕಳ್ಳರು ಕಾರನ್ನು ಮತ್ತು ಮೊಬೈಲ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಬಜ್ಜೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್, ಮೂಡುಬಿದಿರೆಯ ಪೊಲೀಸ್ ಉಪ ನಿರೀಕ್ಷಕ ಸಿದ್ದಪ್ಪ, ಬಜರಂಗದಳದ ತಾಲೂಕು ಸಂಚಾಲಕ ಅಭಿಲಾಶ್ ಸಹಿತ ಕಾರ್ಯಕರ್ತರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Previous articleತಾಳ್ಮೆ ಮತ್ತು ಏಕನಿಷ್ಠೆ
Next article‘ಆದಿಪುರುಷ’ನ ಸಂಭಾಷಣೆಗೆ ಭಾರಿ ಆಕ್ಷೇಪ: ವಿವಾದಿತ ಸಂಭಾಷಣೆ​ ಬದಲಿಸಲು ಚಿತ್ರತಂಡ ನಿರ್ಧಾರ