ನವದೆಹಲಿ: ಭಾರತದ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಗಗನನೌಕೆ ಗುರುವಾರ ಸಂಜೆ ಅಂತಾ ರಾಷ್ಟ್ರೀಯ ಬಾಹ್ಯಾಕಾಶ (ಐಎಸ್‌ಎಸ್)ವನ್ನು ತಲುಪಿದೆ. ಈ ಮೂಲಕ ಐಎಸ್‌ಎಸ್ ತಲುಪಿದ ಮೊದಲ ಭಾರತೀಯ ಎನ್ನುವ ಖ್ಯಾತಿಗೆ ಶುಭಾಂಶು ಪಾತ್ರರಾಗಿದ್ದಾರೆ. ಬಾಹ್ಯಾಕಾಶ ತಲುಪಿದ ಕೂಡಲೇ ಈ ಮೊದಲೇ ಒಳಗಿದ್ದ ಗಗನಯಾತ್ರಿಗಳು ಹೊಸ ತಂಡವನ್ನು ಸ್ವಾಗತಿಸಿದ್ದಾರೆ. ಹದಿನಾಲ್ಕು ದಿನಗಳ ಪ್ರಯೋಗಗಳು ಶುಕ್ರವಾರದಿಂದಲೇ ಆರಂಭಗೊಳ್ಳಲಿವೆ.