ʻಕುಟುಂಬ ರಾಜಕಾರಣ ನಾವಷ್ಟೆ ಮಾಡಿಲ್ಲʼ

0
16
ಎಚ್.ಡಿ. ಕುಮಾರಸ್ವಾಮಿ

ಧಾರವಾಡ: ಕುಟುಂಬ ರಾಜಕಾರಣ ನಾವಷ್ಟೆ ಮಾಡಿಲ್ಲ, ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ಯಾವುದೇ‌ ನೈತಿಕತೆ ಇಲ್ಲ. ಬಿಜೆಪಿ ಪಕ್ಷದಲ್ಲಿ ಇರುವ ಕುಟುಂಬ ರಾಜಕಾರಣ ಕುರಿತು ಗಂಭೀರವಾಗಿ ಪರಿಗಣಿಸಿ ಮೊದಲು ತಮ್ಮ ಪಕ್ಷದ ಕುಟುಂಬ ರಾಜಕಾರಣ ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾವು ಸಂವಿಧಾನಾತ್ಮಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜನರಿಂದ ಆಯ್ಕೆಯಾಗಿದ್ದೇವೆ. ಜನರು ನಮ್ಮನ್ನು ಸ್ವೀಕಾರ ಮಾಡಿದ್ದಾರೆ. ನಮ್ಮ ಕುಟುಂಬದ ರಾಜಕೀಯ ಬಗ್ಗೆ ಮಾತನಾಡಲು ಕೇಂದ್ರ ಗೃಹ ಸಚಿವ ಅಮೀತ್ ಷಾ ಅವರಿಗೆ ನೈತಿಕತೆ ಇಲ್ಲ ಎಂದು ತಿಳಿಸಿದರು.

Previous articleಭೂಮಿ ಹಂಚಿಕೆಯಲ್ಲಿ ಅವ್ಯವಹಾರ: ಪರಿಷತ್‌ನಲ್ಲಿನ ಚರ್ಚೆ
Next articleಭವ್ಯ ಕರ್ನಾಟಕ ಕಟ್ಟಲು ದೊಡ್ಡ ಸಾಧನೆ ಆದಿಚುಂಚನಗಿರಿ ಮಠದಿಂದ ಆಗಲಿದೆ: ಬೊಮ್ಮಾಯಿ