Home Advertisement
Home ಆರೋಗ್ಯ ದೇಹ ತಂಪಾಗಿಸಲು ಎರಡೇ ವಾರ ಈ ಜಾದು ಬೀಜ ಸೇವಿಸಿ: ತೂಕ ಇಳಿಕೆಯಿಂದ ಸೌಂದರ್ಯ ವೃದ್ಧಿಯವರೆಗೆ...

ದೇಹ ತಂಪಾಗಿಸಲು ಎರಡೇ ವಾರ ಈ ಜಾದು ಬೀಜ ಸೇವಿಸಿ: ತೂಕ ಇಳಿಕೆಯಿಂದ ಸೌಂದರ್ಯ ವೃದ್ಧಿಯವರೆಗೆ ಇಲ್ಲಿದೆ ಮಾಹಿತಿ!

0
2

ಈ ಬಿಸಿನ ತಾಪಕ್ಕೆ ನಿಮ್ಮ ದೇಹ ಉಷ್ಣಾಂಶವು ಹೆಚ್ಚುತ್ತದೆ. ಅಲ್ಲದೆ ಆರೋಗ್ಯದ ಮೇಲು ಅಡ್ಡ ಪರಿಣಾಮ ಬಿರುತ್ತದೆ. ಹೀಗಿರುವಾಗ ಉತ್ತಮ ಜೀನಶೈಲಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಅದಕ್ಕೆ ದಿನನಿತ್ಯ ನೀರಿನ ಜೊತೆ ಈ ಬೀಜಗಳನ್ನ ಸೇರಿಸಿ ಸೇವಿಸುವುದು ಉತ್ತಮ.

ಇದನ್ನು ಕೇವಲ 14 ದಿನಗಳ ಕಾಲ ಚಿಯಾ ಬೀಜಗಳನ್ನು (Chia Seeds) ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಆಶ್ಚರ್ಯಕರ ಬದಲಾವಣೆಗಳನ್ನು ಕಾಣಬಹುದು. ಈ ಪುಟ್ಟ ಬೀಜಗಳು ಕೇವಲ ಸೂಪರ್ ಫುಡ್ ಮಾತ್ರವಲ್ಲ, ಹತ್ತಾರು ಕಾಯಿಲೆಗಳಿಗೆ ರಾಮಬಾಣವೂ ಹೌದು.

ಪೋಷಕಾಂಶಗಳ ಕಣಜ: ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-3 ಫ್ಯಾಟಿ ಆಸಿಡ್, ಪ್ರೊಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಪ್ರತಿದಿನ ಎರಡು ಟೇಬಲ್‌ಸ್ಪೂನ್ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿ: ಚಿಯಾ ಬೀಜಗಳಲ್ಲಿರುವ ಅಧಿಕ ಫೈಬರ್ ಅಂಶವು ನೀರನ್ನು ಹೀರಿಕೊಂಡು ಜೆಲ್ ರೂಪಕ್ಕೆ ತಿರುಗುತ್ತದೆ. ಇದು ಮಲಬದ್ಧತೆ ನಿವಾರಿಸುವುದಲ್ಲದೆ, ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ತಪ್ಪುತ್ತದೆ ಮತ್ತು ತೂಕ ಇಳಿಸಲು ಸುಲಭವಾಗುತ್ತದೆ. ಅಲ್ಲದೆ ಇದು ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.

ಹೃದಯದ ಆರೋಗ್ಯ ಮತ್ತು ಸಕ್ಕರೆ ನಿಯಂತ್ರಣ: ಈ ಬೀಜಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತವೆ. ಊಟದ ನಂತರ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗದಂತೆ ತಡೆಯುವ ಶಕ್ತಿ ಇವುಗಳಿಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಇದು ಅತ್ಯುತ್ತಮ ಆಹಾರ ಪಥ್ಯವಾಗಿದೆ.

ಸೌಂದರ್ಯ ವರ್ಧಕ ಮತ್ತು ಕೂದಲಿನ ಆರೈಕೆ: ಚಿಯಾ ಬೀಜಗಳನ್ನು ನೆನೆಸಿ ಕುಡಿಯುವುದರ ಜೊತೆಗೆ ಬೆಳ್ಳುಳ್ಳಿ ಸೇವನೆಯನ್ನು ರೂಢಿಸಿಕೊಂಡರೆ ಮುಖದಲ್ಲಿನ ಮೊಡವೆ ಕಡಿಮೆ ಮಾಡಿ, ಮುಖದ ಮೇಲಿರುವ ರಂಧ್ರಗಳನ್ನು ಮುಚ್ಚುತ್ತದೆ. ಹಾಗೇ ಸೌಂದರ್ಯಯುತವಾಗಿ ಕಾಣಲು ಈ ಬೀಜಗಳು ಬಹಳ ಸಹಾಯಕವಾಗಿವೆ. ಅಷ್ಟೇ ಅಲ್ಲದೇ.. ಇವುಗಳಲ್ಲಿರುವ ಸತು ಮತ್ತು ಪ್ರೊಟೀನ್ ಅಂಶವು ಕೂದಲಿನ ಬುಡವನ್ನು ಗಟ್ಟಿಗೊಳಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.

ಸೇವಿಸುವ ವಿಧಾನ: ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಟ್ಟ ಚಿಯಾ ಬೀಜಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಇನ್ನು ಹೆಚ್ಚಿನ ಲಾಭಕ್ಕಾಗಿ ಇದನ್ನು ಮೊಸರಿನೊಂದಿಗೆ ಬೆರೆಸಿ ತಿನ್ನಬಹುದು ಮತ್ತು ಮೊಸರಿನಿಂದ ದೇಹ ತಂಪಾಗಿರುತ್ತದೆ. ಕೇವಲ ಎರಡು ವಾರಗಳ ಈ ಸಣ್ಣ ಬದಲಾವಣೆ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿ ಇಡೀ ದಿನ ನಿಮ್ಮನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ.