Home Advertisement
Home ಆರೋಗ್ಯ ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ!

ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ!

0
25

ಕಿಡ್ನಿ ದಾನ ಮಾಡಲು ಇರುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಬಹು ಜೋಡಿ ಮೂತ್ರಪಿಂಡ ವಿನಿಮಯ ಕಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಿಡ್ನಿ ದಾನಿಗಳು ಲಭ್ಯವಿದ್ದರೂ, ರಕ್ತದ ಗುಂಪು ಅಥವಾ ಆಂಗಾಂಶಗಳು ಹೊಂದಾಣಿಕೆಯಾಗದ ಕಾರಣ ಕಸಿ ಸಾಧ್ಯವಾಗದೆ ಪರದಾಡುತ್ತಿದ್ದ ರೋಗಿಗಳ ನೆರವಿಗೆ ಧಾವಿಸಿರುವ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ನೂತನ ನಿಯಮಾವಳಿಯಿಂದಾಗಿ ಇನ್ನು ಮುಂದೆ ದ್ವಿಮುಖ (ಇಬ್ಬರು ದಾನಿಗಳು), ತ್ರಿಮುಖ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜೋಡಿಗಳು ಪರಸ್ಪರ ಕಿಡ್ನಿಗಳನ್ನು ವಿನಿಮಯ ಮಾಡಿಕೊಂಡು ಮರುಜೀವ ಪಡೆಯಲು ಕಾನೂನುಬದ್ಧ ಅವಕಾಶ ಸಿಕ್ಕಂತಾಗಿದೆ.

ಏನಿದು ‘ಬಹು-ಜೋಡಿ’ ವಿನಿಮಯ: ಸಾಮಾನ್ಯವಾಗಿ ರೋಗಿಯ ಕುಟುಂಬದವರೇ ಕಿಡ್ನಿ ದಾನ ಮಾಡಲು ಮುಂದೆ ಬಂದರೂ, ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೆ ಕಸಿ ಮಾಡುವುದು ಕಷ್ಟವಾಗುತ್ತಿತ್ತು. ಈಗ ಜಾರಿಗೆ ಬಂದಿರುವ ‘ಸ್ವಾಪ್’ ವ್ಯವಸ್ಥೆಯಲ್ಲಿ, ಎ ಎಂಬ ರೋಗಿಯ ದಾನಿಯು ಬಿಎಂಬ ರೋಗಿಗೆ ಮತ್ತು ಬಿ ರೋಗಿಯ ದಾನಿಯು ಎ ರೋಗಿಗೆ ಕಿಡ್ನಿ ನೀಡಬಹುದು. ಈ ಹೊಸ ಮಾರ್ಗಸೂಚಿಯಡಿ ಕೇವಲ ಇಬ್ಬರಷ್ಟೇ ಅಲ್ಲದೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಜೋಡಿಗಳು ಒಟ್ಟಾಗಿ ಈ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

  • ಪ್ರಮುಖ ಅಂಶಗಳು:
  • 1994ರ ಮಾನವ ಅಂಗಾಂಗ ಕಸಿ ಕಾಯ್ದೆಯಡಿ ವ್ಯಾಖ್ಯಾನಿಸಲಾದ ‘ಸಮೀಪ ಸಂಬಂಧಿಗಳು’ ಮಾತ್ರ ಈ ವಿನಿಮಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು.
    ದಾನಿ ಮತ್ತು ಸ್ವೀಕರಿಸುವವರ ನಡುವೆ ರಕ್ತದ ಗುಂಪು ಅಥವಾ ಅಂಗಾಂಶಗಳ ಅಸಾಮರಸ್ಯ ಇರುವುದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿರಬೇಕು.
  • ವಿನಿಮಯ ಗುಂಪಿನಲ್ಲಿರುವ ಎಲ್ಲಾ ದಾನಿಗಳು ಮತ್ತು ಸ್ವೀಕರಿಸುವವರು ಒಟ್ಟಾಗಿ ದಾನ ನೀಡಲು ಮತ್ತು ಸ್ವೀಕರಿಸಲು ಒಂದೇ ಜಂಟಿ ಒಪ್ಪಂದಕ್ಕೆ ಸಹಿ ಮಾಡುವುದು ಕಡ್ಡಾಯ.”ಯಾವುದೇ ಹಂತದಲ್ಲಿ ಹಣದ ವ್ಯವಹಾರ ಅಥವಾ ವಾಣಿಜ್ಯ ವಹಿವಾಟು ನಡೆದರೆ ಅಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಪ್ರತಿಯೊಂದು ಕಸಿ ಪ್ರಕ್ರಿಯೆಗೂ ಮುನ್ನ ‘ರಾಜ್ಯ ಮಟ್ಟದ ಅಧಿಕಾರ ಸಮಿತಿ’ಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಇಡೀ ಪ್ರಕ್ರಿಯೆಯನ್ನು

ಪಾರದರ್ಶಕತೆಗೆ ಆದ್ಯತೆ: ಈ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದಲೇ ರಕ್ತದ ಅಡ್ಡ-ಹೊಂದಾಣಿಕೆ ಪರೀಕ್ಷೆ ನಡೆಸಬೇಕು ಮತ್ತು ಅಗತ್ಯವಿದ್ದಲ್ಲಿ ಡಿಎನ್ಎ ಪ್ರೊಫೈಲಿಂಗ್ ವರದಿಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.