ರಾಕಿಂಗ್ ಸ್ಟಾರ್ ಯಶ್: ಟಾಕ್ಸಿಕ್ ಆ್ಯಕ್ಷನ್ ಶೂಟಿಂಗ್ ಶುರು

0
32

ನಟ ರಾಕಿಂಗ್ ಸ್ಟಾರ್ ಯಶ್‌ ಅಭಿನಯಿಸಿ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಸಾಹಸ ದೃಶ್ಯಗಳಿಗೆ ಹೆಚ್ಚಿನ ಪ್ರಾಧ್ಯನತೆ ನೀಡಿದ್ದು ಅದಕ್ಕೆ ಇಂಬು ನಿಡುವಂತೆ ಹಾಲಿವುಡ್‌ ಸಾಹಸ ನಿರ್ದೇಶಕ ಜೆಜೆ ಪೆರ್ರಿ‌ ಟಾಕ್ಸಿಕ್ ಚಿತ್ರದ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದಾರೆ.

ಮುಂಬೈನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಹಾಲಿವುಡ್‌ನ ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆ‌ಜೆ‌‌ಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಬರೋಬ್ಬರಿ 45 ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆ ಬರೆಯಲಿದೆ ಟಾಕ್ಸಿಕ್.

ಹಾಲುವುಡ್‌ಗೆ ಸಡ್ಡು ಹೊಡೆಯುವಂತಹ ಸ್ಟಂಟ್ಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಹಾಲಿವುಡ್‌ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರು ಚಿತ್ರ ತಂಡದೊಂದಿಗೆ ಆಕ್ಷನ್ ದೃಶ್ಯಗಳನ್ನು ಸೇರ ಹಿಡಿಯಲು ಚಿತ್ರೀಕರಣದಲ್ಲಿ ತೊಡಗಿ ಕೊಂಡಿದ್ದಾರೆ. ಸಾಹಸ ನಿರ್ದೇಶಕ ಜೆಜೆ ಪೆರ್ರಿ ಹಾಗೂ ನಟ ಯಶ್‌ ಅವರ ಚಿತ್ರಿಕರಣದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಟಾಕ್ಸಿಕ್ ಚಿತ್ರದಲ್ಲಿ ಐವರು ನಾಯಕಿಯರು: ಭಾರತೀಯ ಚಿತ್ರರಂಗದ ಪ್ರಸಿದ್ಧ ಐವರು ನಾಯಕಿಯರು ಟಾಕ್ಸಿಕ್‌ ಚಿತ್ರದಲ್ಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ, ಹಾಗೂ ರುಕ್ಮಿಣಿ ವಸಂತ್‌ ತಾರಾ ಸುತಾರಿಯಾ, ನಯನತಾರಾ, ಹ್ಯೂಮಾ ಖುರೇಷಿ ಟಾಕ್ಸಿಕ್ ಚಿತ್ರದಲ್ಲಿ  ನಟಿಸುತ್ತಿದ್ದಾರೆ

ಮಾರ್ಚ್​ 19ಕ್ಕೆ ಬಿಡುಗಡೆ: ವೆಂಕಟ್ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ನಿರ್ದೇಶಕ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಾಜೀವ್ ರೈ ಅವರ ಛಾಯಾಗ್ರಹಣವಿದೆ. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಲಾಗಿದ್ದು, ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿನಿಮಾದ ಚಿತ್ರೀಕರಣ ಬೆಂಗಳೂರು, ಮುಂಬೈಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಅದಾದ ಬಳಿಕ ತೂತುಕುಡಿ, ರಾಜಸ್ಥಾನದ ಜೈಪುರಗಳಲ್ಲಿಯೂ ಸಿನಿಮಾದ ಚಿತ್ರೀಕರಣ ನಡೆದಿದೆ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್​ 19ಕ್ಕೆ ಬಿಡುಗಡೆ ಆಗಲಿದೆ.

Previous articleಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸ ಖಾಲಿ ಇದೆ: ಹುದ್ದೆ, ವೇತನ
Next articleಬೆಂಗಳೂರು: ಗಣೇಶ ಪ್ರತಿಷ್ಠಾಪನೆಗೆ ಮಾರ್ಗಸೂಚಿಗಳೇನು?

LEAVE A REPLY

Please enter your comment!
Please enter your name here