Home Advertisement
Home ಸಿನಿ ಮಿಲ್ಸ್ “ಯಾರು ಆ ‘ಡ್ಯಾಡಿ’..? ‘ಟಾಕ್ಸಿಕ್’ ಟೀಸರ್‌ನಲ್ಲಿ ಅಡಗಿರುವ ಟಾಪ್ ಸೀಕ್ರೆಟ್‌ಗಳು ಇಲ್ಲಿವೆ ನೋಡಿ!”

“ಯಾರು ಆ ‘ಡ್ಯಾಡಿ’..? ‘ಟಾಕ್ಸಿಕ್’ ಟೀಸರ್‌ನಲ್ಲಿ ಅಡಗಿರುವ ಟಾಪ್ ಸೀಕ್ರೆಟ್‌ಗಳು ಇಲ್ಲಿವೆ ನೋಡಿ!”

0
11

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಈಗ ಸಿನಿಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಟೀಸರ್ ಇಂದು (ಫೆಬ್ರವರಿ 20) ಬಿಡುಗಡೆಯಾಗಿದ್ದು, ಕೇವಲ ಒಂದು ಗಂಟೆಯಲ್ಲಿ ಮಿಲಿಯನ್‌ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದೆ.

ಟೀಸರ್‌ನಲ್ಲಿ ಅಡಗಿರುವ ಸೀಕ್ರೆಟ್ಸ್ ಮತ್ತು ಹೈಲೈಟ್ಸ್: ಈ ಹಿಂದೆ ಬಿಡುಗಡೆಯಾಗಿದ್ದ ‘ಇಂಟ್ರಡ್ಯೂಸಿಂಗ್ ರಾಯ’ ಟೀಸರ್‌ಗಿಂತಲೂ ಈ ಹೊಸ ಟೀಸರ್ ಸಂಪೂರ್ಣ ಭಿನ್ನವಾದ ಲೋಕವನ್ನು ಪರಿಚಯಿಸಿದೆ. ಟೀಸರ್‌ನ ಆರಂಭದಲ್ಲೇ ಕೇಳಿಬರುವ, “ಈ ಸಲ ಯುದ್ಧನೇ ಬೇರೆ.. ಅವರುಗಳ ಕುತಂತ್ರನೇ ಬೇರೆ.. ಎಲ್ಲರನ್ನ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ.. ಹಠ ಬಿಟ್ಟುಬಿಡು.. ಗಿವ್ ಅಪ್ ರಾಯ..”ಎಂಬ ಡೈಲಾಗ್ ಕುತೂಹಲದ ಕೇಂದ್ರಬಿಂದುವಾಗಿದೆ. ಇದಕ್ಕೆ ಪ್ರತಿಯಾಗಿ ಯಶ್, “ಇಟ್ಸ್ ಓವರ್ ವೆನ್ ಐ ಸೇ ಇಟ್ಸ್ ಓವರ್” ಎನ್ನುವ ಮೂಲಕ ರಾಯಯಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ.

ವಿಭಿನ್ನ ಲುಕ್ ಹಾಗೂ ವಿವಾದಾತ್ಮಕ ಡೈಲಾಗ್: ಯಶ್ ಈ ಚಿತ್ರದಲ್ಲಿ ಇದುವರೆಗೆ ನೋಡಿರದ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಉದ್ದ ಕೂದಲು ಬಿಟ್ಟು ರೆಟ್ರೋ ಲುಕ್‌ನಲ್ಲಿ ಗಮನ ಸೆಳೆದರೆ, ಟೀಸರ್ ಅಂತ್ಯದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಚಿತ್ರಕ್ಕೆ ‘ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಎಂಬ ಟ್ಯಾಗ್‌ಲೈನ್ ಇರುವುದರಿಂದ, ಇಲ್ಲಿ ವೈಲೆನ್ಸ್ ಮತ್ತು ಭಾಷೆಯ ಬಳಕೆ ತುಸು ಕಠಿಣವಾಗಿಯೇ ಇದೆ. ಯಶ್ ಬಾಯಲ್ಲಿ ಬಂದ “ಮ್ಯಾನರ್ಸ್..” ಕುರಿತಾದ ವಿವಾದಾತ್ಮಕ ಡೈಲಾಗ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದೆ.

ತಾರಾಗಣ ಮತ್ತು ತಾಂತ್ರಿಕ ತಂಡ: ‘ಟಾಕ್ಸಿಕ್’ ಕಥೆಯು ಡ್ರಗ್ ಮಾಫಿಯಾ ಅಥವಾ ಅಂಡರ್‌ವರ್ಲ್ಡ್ ಹಿನ್ನೆಲೆ ಹೊಂದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣವಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ, ‘ಡ್ಯಾಡೀಸ್ ಹೋಮ್’ ಎಂಬ ನಿಗೂಢ ಸಂದೇಶದೊಂದಿಗೆ ಬಂದಿರುವ ‘ಟಾಕ್ಸಿಕ್’, ಮಾರ್ಚ್ 19 ರಂದು ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ.

Previous articleಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
Next articleತುಳುನಾಡಿನ ನೆಲೆಯ ‘ರಾಜ‌ನಿವಾಸ’: ಕಾಂತಾರ ಹೋಲಿಕೆಗೂ ನಿರ್ದೇಶಕರ ಉತ್ತರ