Home Advertisement
Home ಸಿನಿ ಮಿಲ್ಸ್ ಕನ್ನಡ ಕಿರುತೆರೆಯ ಜನಪ್ರಿಯ ನಟಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’

ಕನ್ನಡ ಕಿರುತೆರೆಯ ಜನಪ್ರಿಯ ನಟಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’

0
4

ಕನ್ನಡ ಕಿರುತೆರೆಯ ನೆಚ್ಚಿನ ನಟಿಯರಲ್ಲಿ ಒಬ್ಬರಾದ, ‘ಲಕುಮಿ’ ಖ್ಯಾತಿಯ ಸುಷ್ಮಾ ಶೇಖರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಪ್ರಜ್ವಲ್ ಅವರೊಂದಿಗೆ ಜನವರಿ 25ರ ಭಾನುವಾರದಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗುವ ಮೂಲಕ ಹೊಸ ಬದುಕಿನ ಪಯಣ ಆರಂಭಿಸಿದ್ದಾರೆ.

ಸಂಭ್ರಮದ ಮದುವೆ: ಕಳೆದ ಕೆಲವು ದಿನಗಳಿಂದ ಸುಷ್ಮಾ ಮದುವೆಯ ಪೂರ್ವ ಶಾಸ್ತ್ರಗಳಾದ ಅರಿಶಿನ ಶಾಸ್ತ್ರ, ಮೆಹಂದಿ ಹಾಗೂ ಸಂಗೀತ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಿನ್ನೆ ನಡೆದ ವಿವಾಹ ಮಹೋತ್ಸವದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಕಿರುತೆರೆಯ ಹಲವು ಗಣ್ಯರು ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಸುಷ್ಮಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದರು.

ಬಾಲನಟಿಯಿಂದ ನಾಯಕಿಯವರೆಗೆ: ಸುಷ್ಮಾ ಶೇಖರ್ ಕಿರುತೆರೆಗೆ ಪರಿಚಿತರಾಗಿದ್ದು ಬಾಲನಟಿಯಾಗಿ. ‘ವೆಂಕಟೇಶ್ವರ ಮಹಿಮೆ’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಾಗೇ ‘ಲಕುಮಿ’ ಧಾರಾವಾಹಿಯ ಶೀರ್ಷಿಕೆ ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾದರು.

ನಂತರ ‘ಕುಸುಮಾಂಜಲಿ’ ಹಾಗೂ ‘ಕನಕ’ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ನಟನೆಯ ಜೊತೆಜೊತೆಗೇ ಶಿಕ್ಷಣಕ್ಕೂ ಮಹತ್ವ ನೀಡಿದ ಸುಷ್ಮಾ, ಬಿಬಿಎ ಪದವಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಅಭಿಮಾನಿಗಳ ಮೆಚ್ಚಿನ ನಟಿ: ಕೇವಲ ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಲ್ಲೂ ಸುಷ್ಮಾ ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ. ‘ಯಾರೇ ನೀ ಮೋಹಿನಿ’ ಮತ್ತು ಇತ್ತೀಚಿನ ಜನಪ್ರಿಯ ಸೀರಿಯಲ್ ‘ಗಿಣಿರಾಮ’ ದಲ್ಲಿನ ನಟನೆಗೆ ಜನರಿಂದ ಭರಪೂರ ಪ್ರಶಂಸೆ ವ್ಯಕ್ತವಾಗಿತ್ತು.

ಇದಾದ ನಂತರ ಅಭಿನಯದಿಂದ ಸಣ್ಣ ಬ್ರೇಕ್ ಪಡೆದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಸುಷ್ಮಾ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು.

ಸದ್ಯ ಸುಷ್ಮಾ ಶೇಖರ್ ವಿವಾಹದ ಸುಂದರ ಕ್ಷಣಗಳ ಫೋಟೋಗಳು ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು “ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ” ಎಂದು ಶುಭ ಹಾರೈಸುತ್ತಿದ್ದಾರೆ.

Previous articleಉಡುಪಿ: ಪ್ರವಾಸಿಗರ ದೋಣಿ ದುರಂತ – ಇಬ್ಬರ ಸಾವು