Home Advertisement
Home ಸಿನಿ ಮಿಲ್ಸ್ ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್ ‘ಕ್ಲೀನ್ ಸ್ವೀಪ್’: ಡಿವೈನ್ ಸ್ಟಾರ್ ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನೇ!

ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್ ‘ಕ್ಲೀನ್ ಸ್ವೀಪ್’: ಡಿವೈನ್ ಸ್ಟಾರ್ ಫಾಲೋ ಮಾಡುತ್ತಿರುವುದು ಕೇವಲ ಮೂವರನ್ನೇ!

0
20

ಬೆಂಗಳೂರು: ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಖ್ಯಾತಿಯನ್ನ ಪಡೆದು, ‘ಕಾಂತಾರ’ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗ ತಮ್ಮ ಸೋಷಿಯಲ್ ಮೀಡಿಯಾ ಚಟುವಟಿಕೆಯಿಂದಾಗಿ ಸುದ್ದಿಯಲ್ಲಿದ್ದಾರೆ. ಹೌದು, ರಿಷಬ್ ಶೆಟ್ಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ‘ಫಾಲೋಯಿಂಗ್’ ಲಿಸ್ಟ್‌ನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಸಾವಿರಾರು ಮಂದಿಯನ್ನು ಅನ್‌ಫಾಲೋ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತಾಗಿದೆ.

ಈ ಬೆನ್ನಲೇ ಹೊಂಬಾಳೆ ಫಿಲ್ಮ್‌ ಅನ್‌ಫಾಲೋ ಮಾಡಿದ್ರು ಎಂಬ ವಿಚಾರವು ಸಹ ಬಹಳ ಸುದ್ದಿಗೆ ಗ್ರಾಸವಾಗಿತ್ತು. ಈಗ ರಿಷಬ್‌ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 3 ಅಕೌಂಟ್‌ಗಳನ್ನ ಮಾತ್ರ ಫಾಲೋ ಮಾಡಿದ್ದಾರೆ. ಈ ಹಿಂದೆ ಚಿತ್ರರಂಗದ ನೂರಾರು ಆಪ್ತರು ಹಾಗೂ ಸಹೋದ್ಯೋಗಿಗಳನ್ನು ಫಾಲೋ ಮಾಡುತ್ತಿದ್ದ ರಿಷಬ್, ಇನ್ನೂಳಿದ ಎಲ್ಲ ಅಕೌಂಟ್‌ಗಳ ಜೊತೆ, ರುಕ್ಮಿಣಿ ವಸಂತ್, ಮತ್ತು ರಾಜ ಬೀ ಶೆಟ್ಟಿ ಅಕೌಂಟ್‌ಗಳನ್ನು ಅನ್‌ಫಾಲೋ ಮಾಡಿದ್ದಾರೆ.

  • ಸದ್ಯ ಫಾಲೋಯಿಂಗ್ ಲಿಸ್ಟ್‌ನಲ್ಲಿ ಉಳಿದವರು ಯಾರು? ಅವುಗಳೆಂದರೆ:
  • ಪ್ರಗತಿ ಶೆಟ್ಟಿ: ಪತ್ನಿ ಹಾಗೂ ವಸ್ತ್ರವಿನ್ಯಾಸಕಿ.
  • ರಿಷಬ್ ಶೆಟ್ಟಿ ಫಿಲ್ಮ್ಸ್: ಅವರ ಸ್ವಂತ ನಿರ್ಮಾಣ ಸಂಸ್ಥೆ.
  • ರಿಷಬ್ ಶೆಟ್ಟಿ ಫೌಂಡೇಶನ್: ಅವರ ಸಾಮಾಜಿಕ ಸೇವಾ ಸಂಸ್ಥೆ.

ಹೊಂಬಾಳೆ ಫಿಲ್ಮ್ಸ್ ಅನ್‌ಫಾಲೋ: ವದಂತಿಗಳಿಗೆ ತೆರೆ ಕೆಲವು ದಿನಗಳ ಹಿಂದೆ ರಿಷಬ್ ತಮಗೆ ಜಾಗತಿಕ ಮಟ್ಟದ ಯಶಸ್ಸು ತಂದುಕೊಟ್ಟ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯನ್ನು ಅನ್‌ಫಾಲೋ ಮಾಡಿದ್ದರು. ಇದು ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ರಿಷಬ್ ಹಾಗೂ ಹೊಂಬಾಳೆ ಸಂಸ್ಥೆಯ ನಡುವೆ ಭಿನ್ನಾಭಿಪ್ರಾಯ ಮೂಡಿದೆಯೇ ಎಂಬ ವದಂತಿಗಳು ಹಬ್ಬಿದ್ದವು. ಆದ್ರೆ ಈಗ ರಿಷಬ್ ಕೇವಲ ಹೊಂಬಾಳೆ ಮಾತ್ರವಲ್ಲದೆ, ತಮ್ಮ ಆಪ್ತ ಗೆಳೆಯರಾದ ರಾಜ್ ಬಿ. ಶೆಟ್ಟಿ ಹಾಗೂ ಇತರೆ ಸ್ಟಾರ್ ನಟರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ಇದು ಯಾವುದೇ ವೈಯಕ್ತಿಕ ಮುನಿಸಲ್ಲ, ಬದಲಾಗಿ ಇನ್‌ಸ್ಟಾಗ್ರಾಮ್ ನಿರ್ವಹಣೆಯ ಹೊಸ ತಂತ್ರ ಎಂಬುದು ಸ್ಪಷ್ಟವಾಗಿದೆ.

‘ಜೈ ಹನುಮಾನ್’ ಚಿತ್ರದ ತಯಾರಿ?: ಸದ್ಯ ರಿಷಬ್ ಶೆಟ್ಟಿ ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಚಿತ್ರಕ್ಕಾಗಿ ರಿಷಬ್ ವಿಶೇಷ ದೀಕ್ಷೆ ಮತ್ತು ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಹುಶಃ ಮಾನಸಿಕ ಏಕಾಗ್ರತೆಗಾಗಿ ಅಥವಾ ಸಿನಿಮಾದ ಪ್ರಚಾರದ ಭಾಗವಾಗಿ ಈ ‘ಡಿಜಿಟಲ್ ಡಿಟಾಕ್ಸ್’ ಮೊರೆ ಹೋಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಒಟ್ಟಾರೆಯಾಗಿ, ರಿಷಬ್ ಈ ನಡೆಯು ಕುತೂಹಲ ಕೆರಳಿಸಿದ್ದು, ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಬೆಳವಣಿಗೆಗಳಿಗೆ ಮಾತ್ರ ಸೋಷಿಯಲ್ ಮೀಡಿಯಾವನ್ನು ಸೀಮಿತಗೊಳಿಸಿಕೊಳ್ಳಲು ಮುಂದಾದಂತೆ ಕಾಣುತ್ತಿದೆ. ಹಾಗೇ ಈ ಸುದ್ದಿಗಳಿ ಇದುವರೆಗೂ ರಿಷಬ್‌ ಶೆಟ್ಟಿ ಯಾವುದೆ ರೀತಿ ಹೇಳಿಕೆ ಅಥವಾ ಫೋಸ್ಟ್‌ಗಳನ್ನ ಹಂಚಿಕೊಂಡಿಲ್ಲ.