Jollyಯಾಗಿ ಮನೆಯಲ್ಲೇ ನೋಡಿ LLB

0
19

ಬಾಲಿವುಡ್‌ನ ಜನಪ್ರಿಯ ಕೋರ್ಟ್ ರೂಮ್ ಕಾಮಿಡಿ–ಡ್ರಾಮಾ ಸರಣಿ ಜಾಲಿ ಎಲ್‌ಎಲ್‌ಬಿ ಯ ಮೂರನೇ ಭಾಗ Jolly LLB 3 ಈಗ OTTಯಲ್ಲಿ ಬಿಡುಗಡೆಯಾಗಿದೆ. ಅರ್ಷದ್ ವಾರ್ಸಿ, ಅಕ್ಷಯ್ ಕುಮಾರ್, ಬೋಮನ್ ಇರಾನಿ ಮತ್ತು ಸೌರಭ್ ಶುಕ್ಲಾ ಅಭಿನಯಿಸಿರುವ ಈ ಸಿನಿಮಾ ಬಿಡುಗಡೆಯಾಗಿದ್ದಾಗ ದೇಶವ್ಯಾಪಿ ದೊಡ್ಡ ಮಟ್ಟದ ಮೆಚ್ಚುಗೆ ಗಳಿಸಿತ್ತು.

ಅಭಿಮಾನಿಗಳ ನಿರೀಕ್ಷೆ – ಡಬಲ್ ಜಾಲಿ!: ಮೊದಲ ಚಿತ್ರದಲ್ಲಿ ಅರ್ಷದ್ ವಾರ್ಸಿ ‘ಜಾಲಿ’ ಪಾತ್ರದಲ್ಲಿ ಮಿಂಚಿದ್ದರು. ಎರಡನೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಬದಲಾಯಿಸಿ ಬಂದಿದ್ದು ಕೆಲವು ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಬಾರಿ ಜಾಲಿ LLB 3 ಯಲ್ಲಿ ಅರ್ಷದ್ ವಾರ್ಸಿ ಹಾಗೂ ಅಕ್ಷಯ್ ಕುಮಾರ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದು. ಇದು ಸರಣಿಯ ದೊಡ್ಡ ಸೆಲಿಂಗ್ ಪಾಯಿಂಟ್ ಆಗಿ ಪರಿಣಮಿಸಿದೆ.

ಚಿತ್ರ ಬಿಡುಗಡೆಯಾದ ನಂತರ ವಿಮರ್ಶಕರು ಮತ್ತು ಅಭಿಮಾನಿಗಳು ಇದನ್ನು “must-watch courtroom entertainer” ಎಂದು ಶ್ಲಾಘಿಸಿದ್ದಾರೆ.

ಕೋರ್ಟ್ ರೂಮ್, ಕಾಮಿಡಿ ಮತ್ತು ಕಾನೂನು ಕುತೂಹಲ: ಚಿತ್ರದಲ್ಲಿ ಬೋಮನ್ ಇರಾನಿ ಅವರ ನ್ಯಾಯಾಧೀಶದ ಪಾತ್ರ ಮತ್ತೆ ಹಾಸ್ಯದ ಜೊತೆ ತೀವ್ರತೆ ತಂದುಕೊಡುತ್ತದೆ. ಅಕ್ಷಯ್ ಮತ್ತು ಅರ್ಷದ್ ಅವರ ನಡುವೆ ನಡೆಯುವ courtroom ಹಾಸ್ಯ–ವಿವಾದ ಸಿನಿಮಾದ ಪ್ರಮುಖ ಆಕರ್ಷಣೆ. ಸಾಮಾಜಿಕ ವಿಷಯಗಳನ್ನು ಕಾನೂನು ಹಾಸ್ಯದ ಮೂಲಕ ಮೂಡಿಸುವ ಪ್ರಯತ್ನ ಯಶಸ್ವಿಯಾಗಿದೆ

ಯಾವ OTTಯಲ್ಲಿ ಬಿಡುಗಡೆ: ಒಂದಲ್ಲ ಎರಡು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಚಿತ್ರ ಒಂದೇ OTTಗೆ ಮಾರಾಟವಾಗುತ್ತದೆ. ಆದರೆ ‘ಜಾಲಿ LLB 3’ ಎರಡೆರಡು ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್ ಮತ್ತು ಜಿಯೋಹಾಟ್‌ಸ್ಟಾರ್‌ಗಳಲ್ಲಿ ಬಿಡುಗಡೆಗೆಯಾಗಿದೆ.

Previous articleನಂದಿನಿ ಹೆಸರಲ್ಲಿ ದಂಧೆ: 1 ಲೀಟರ್ ತುಪ್ಪವನ್ನು 4 ಲೀಟರ್ ಮಾಡುತ್ತಿದ್ದ ಖದೀಮರ ಗ್ಯಾಂಗ್ ಅಂದರ್!
Next articleIPL 2026: ಜಡೇಜಾ, ರಸೆಲ್, ಸ್ಯಾಮ್ಸನ್ ಔಟ್! ಹರಾಜಿನ ಅಖಾಡಕ್ಕೆ ಲಗ್ಗೆ ಇಟ್ಟ ಘಟಾನುಘಟಿಗಳು!

LEAVE A REPLY

Please enter your comment!
Please enter your name here