ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೂಲಕ ಕನ್ನಡಿಗರ ಮನೆಮಾತಾಗಿರುವ ‘ಪಟಾಕಿ ಪೋರಿ’ ರಕ್ಷಿತಾ ಶೆಟ್ಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಕಿರಿಕ್ ಮೂಲಕವೇ ಗುರುತಿಸಿಕೊಂಡಿದ್ದ ರಕ್ಷಿತಾ, ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಹುಡುಗನೊಬ್ಬನ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತಾ ಶೆಟ್ಟಿ ಯುವಕನೊಬ್ಬನ ಜೊತೆ ಬಹಳ ಆಪ್ತವಾಗಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡುತ್ತಿರುವ ದೃಶ್ಯಗಳು ಹರಿದಾಡಿದ್ದವು. ಇದನ್ನು ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು, “ರಕ್ಷಿತಾ ಬಾಯ್‌ಫ್ರೆಂಡ್ ಇವರೇನಾ?” ಎಂದು ಪ್ರಶ್ನಿಸಲು ಶುರು ಮಾಡಿದ್ದರು.
ಹಾಗೇ ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, “ಬಾಯ್‌ಫ್ರೆಂಡ್ ಇದ್ದರೂ ಬಿಗ್‌ಬಾಸ್ ಮನೆಯೊಳಗೆ ಸಿಂಗಲ್ ಎಂಬಂತೆ ನಾಟಕ ಮಾಡಿದ್ದರು” ಎಂದು ಟೀಕೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ವಿರುದ್ಧ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
ಚರ್ಚೆಗೆ ರಕ್ಷಿತಾ ಶೆಟ್ಟಿ ನೀಡಿದ ಸ್ಪಷ್ಟನೆ: ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಸ್ವತಃ ರಕ್ಷಿತಾ ಶೆಟ್ಟಿ ಬ್ರೇಕ್ ಹಾಕಿದ್ದಾರೆ. ಆ ವಿಡಿಯೋದ ಹಿಂದಿರುವ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ, ಅದು ಯಾವುದೇ ಪ್ರೇಮ ಸಂಬಂಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಆ ವಿಡಿಯೋ ಕೇವಲ ಒಂದು ಪ್ರಮೋಷನಲ್ ಶೂಟ್ ಆಗಿತ್ತು.
ವ್ಯಾಲೆಂಟೈನ್ಸ್ ಡೇ ಪ್ರಮೋಷನ್ ಮಾಡುವಾಗ ಒಬ್ಬರೇ ಮಾಡಲು ಸಾಧ್ಯವಿಲ್ಲದ ಕಾರಣ, ನನ್ನ ಸ್ನೇಹಿತನ ಜೊತೆ ಆ ವಿಡಿಯೋ ಮಾಡಿದ್ದೆ. ಅದನ್ನು ನೋಡಿ ಜನರು ತಪ್ಪಾಗಿ ಭಾವಿಸಿದ್ದಾರೆ. ನನಗೂ ಆತನಿಗೂ ಯಾವುದೇ ಪ್ರೇಮ ಸಂಬಂಧವಿಲ್ಲ,” ಎಂದು ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾ ಪಟಾಕಿ: ಮೂಲತಃ ಯೂಟ್ಯೂಬ್ ವ್ಲಾಗ್‌ಗಳ ಮೂಲಕ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಸೀಸನ್ 12ರಲ್ಲಿ ರನ್ನರ್ ಅಪ್ ಆಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಸದ್ಯ ದೊಡ್ಡ ಮಟ್ಟದ ಫ್ಯಾನ್ ಬೇಸ್ ಹೊಂದಿರುವ ರಕ್ಷಿತಾ, ಇಂತಹ ಟ್ರೋಲ್‌ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಸಿಂಗಲ್’ ಎಂಬುದನ್ನೇ ತಮ್ಮ ಮಾತುಗಳ ಮೂಲಕ ಪರೋಕ್ಷವಾಗಿ ಸಾಬೀತುಪಡಿಸಿದ್ದಾರೆ.
ಒಟ್ಟಿನಲ್ಲಿ ವೈರಲ್ ಆಗಿದ್ದ ಆ ವಿಡಿಯೋ ಕೇವಲ ವೃತ್ತಿಪರ ಕೆಲಸದ ಭಾಗವಾಗಿತ್ತೇ ಹೊರತು, ರಕ್ಷಿತಾ ಖಾಸಗಿ ಬದುಕಿನ ಪ್ರೇಮ ಕಥೆಯಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ.























