ಅಂದೊಂದಿತ್ತು ಕಾಲ: ಗತಕಾಲದ ಪ್ರೀತಿಗೆ ಹೊಸ ರಾಗಸಿಂಚನ

0
55

ನಟ ವಿನಯ್ ರಾಜ್‌ಕುಮಾರ್ ಮತ್ತು ನಟಿ ಅದಿತಿ ಪ್ರಭುದೇವ ನಟಿಸಿರುವ ಅಂದೊಂದಿತ್ತು ಕಾಲ ಮುಂದಿನ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದ `ಮುಂಗಾರು ಮಳೆಯಲ್ಲಿ’ ಎಂಬ ಹಾಡು ಮಿಲಿಯನ್ ಹಿಟ್ಸ್ ದಾಖಲಿಸಿರುವುದು ಚಿತ್ರದ ಆಹ್ವಾನ ಪತ್ರಿಕೆಯಂತೆ ಕೇಳುಗರನ್ನು ಆಕರ್ಷಿಸಿದೆ ಎಂಬ ಖುಷಿಯಲ್ಲಿದೆ ಈ ಚಿತ್ರತಂಡ.

90ರ ದಶಕ ಹಾಗೂ ವಾಸ್ತವದ ಪ್ರೀತಿಗೆ ಈ ಚಿತ್ರ ಕನ್ನಡಿ ಹಿಡಿಯಲಿದೆಯಂತೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಕೀರ್ತಿ ಕೃಷ್ಣ. ಭುವನ್ ಸಿನಿಮಾಸ್ ಅಡಿ ಸುರೇಶ್ ಬಂಡವಾಳ ಹೂಡಿದ್ದಾರೆ.ವಿ.ರಾಘವೇಂದ್ರ ಐದೂ ಹಾಡುಗಳನ್ನು ಚೆನ್ನಾಗಿ ಮಾಡಿದ್ದಾರೆ. ಇದು ಒಬ್ಬ ನಿರ್ದೇಶಕನ ಜೀವನದ ಕಥೆ. ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತದೆ. ನಿರ್ಮಾಪಕ ಸುರೇಶ್ ಖುಷಿಯಿಂದ ಸಿನಿಮಾ ಮಾಡಿದ್ದಾರೆ. ನಿಶಾ ರವಿಕೃಷ್ಣನ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು, ಜಗ್ಗಪ್ಪ, ಗೋವಿಂದೇ ಗೌಡ, ಧರ್ಮೇಂದ್ರ ಅರಸ್ ಮುಂತಾದವರು ತಾರಾಗಣದಲ್ಲಿದ್ದು, ನಟ ವಿ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʼಅಂದೊಂದಿತ್ತು ಕಾಲ’ ಚಿತ್ರದ ಮುಂಗಾರು ಮಳೆಯಲ್ಲಿ ಎಂಬ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಿರ್ಮಾಪಕ ಭುವನ್ ಸುರೇಶ್ ಅವರ ಪ್ರೋತ್ಸಾಹವಿಲ್ಲದಿದ್ದರೆ, ಹಾಡು ಈ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ. ವಿನಯ್ ಮತ್ತು ಅದಿತಿ ಅವರ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿದೆ’ ಎಂಬುದು ಸಂಗೀತ ನಿರ್ದೇಶಕ ರಾಘವೇಂದ್ರ ಅನಿಸಿಕೆ.

ಭುವನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಮುಂದಿನ ಮನೆ ಸಂಭಾಷಣೆ ಇದೆ. ಚಿತ್ರದ ಹಾಡುಗಳಿಗೆ ಡಾ. ವಿ.ನಾಗೇಂದ್ರ ಪ್ರಸಾದ್ ಹಾಗೂ ಧನಂಜಯ್ ರಂಜನ್ ಸಾಹಿತ್ಯವಿದೆ. ಸಿದ್ ಶ್ರೀರಾಮ್, ವಿಜಯ ಪ್ರಕಾಶ್ ಸೇರಿದಂತೆ ಅನೇಕ ಖ್ಯಾತ ಗಾಯಕರ ಕಂಠ ಸಿರಿಯಲ್ಲಿ ಹಾಡುಗಳು ಮೂಡಿ ಬಂದಿವೆ.

ಅಂದೊಂದಿತ್ತು ಕಾಲ ಅಪರೂಪದ ಪ್ರೇಮ್ ಕಹಾನಿ ಆಗಿದ್ದು ಆಗಸ್ಟ್ 29ಕ್ಕೆ ಬಿಡುಗಡೆ ಆಗಲಿದೆ.

Previous articleಧರ್ಮಸ್ಥಳ ಪ್ರಕರಣ: ಮುಸುಕುಧಾರಿ ಬಂಧನ, ಗೃಹ ಸಚಿವರು ಹೇಳಿದ್ದೇನು?
Next articleಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧಿಸಿದ ಇಡಿ

LEAVE A REPLY

Please enter your comment!
Please enter your name here